ಉಡುಪಿ: ಗಾಂಧೀಜಯವರನ್ನು ಕೊಂದ ನಾಥುರಾಂ ಗೋಡ್ಸೆಗೆ ಹಿಂದೂ ಮಹಾಸಭ ದೇವಾಲಯ ಕಟ್ಟುತ್ತಿರುವುದು ನಾಚಿಕೆಗೀಡಿನ ವಿಚಾರ ಎಂದು ಕಾಂಗ್ರೆಸ್ ಮುಖಂಡ ಜನಾರ್ದ ಪೂಜಾರಿ ಉಡುಪಿಯಲ್ಲಿ ಲೇವಡಿ ಮಾಡಿದ್ದಾರೆ.
ನಂತರ ಮಾತಾಡಿದ ಅವರು ಗಾಂಧಿ ಹಂತಕ ಗೋಡ್ಸೆಗೆ ದೇವಾಲಯ ಹಾಗೂ ಮೂತರ್ಿಯ ಸ್ಥಾಪನೆ ಜೊತೆಗೆ ಸಕರ್ಾರ ರಾಷ್ಟ್ರೀಯ ವ್ಯಕ್ತಿಯನ್ನಾಗಿ ಘೋಷಣೆ ಮಾಡಬೇಕೆನ್ನುವ ಮನವಿಯನ್ನು ಒಳಗೊಂಡ ಮಹಾಸಭಾದ ದುಷ್ಟ ಯೋಜನೆ ಭಾರತವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತದೆ. ಪ್ರಧಾನಿ ಮೋದಿಯವರು ಏನು ಮಾಡುತ್ತಿದ್ದಾರೆ?. ಬ ಪೂಜಾರಿ ಪ್ರಶ್ನಿಸಿದರು.

ಸಂಘ ಪರಿವಾರದವರು ಮರಳಿ ಮನೆಗೆ ಎಂದು ಹೇಳುವ ಮೂಲಕ ಒತ್ತಾಯಪೂರ್ವಕ ಮತಾಂತರವನ್ನು ಮಾಡುತ್ತ್ತಿದ್ದಾರೆ. ಇದರಿಂದ ದೇಶದ ಶಾಂತಿ ಕದಡಿದೆ ಎಂದು ಪೂಜಾರಿ ಆರೋಪಿಸಿದ್ದಾರೆ.
