ಸುದ್ದಿ9 ಬಂಟ್ವಾಳ: ಬಿ.ಸಿ.ರೋಡಿನ ತ್ಯಾಜ್ಯ ರಾಶಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಕೆಲತಾಸುಗಳ ಕಾಲ ವಾಹನಸವಾರರು ಹಾಗೂ ಪ್ರಯಾಣಿಕರಿಗೆ ಉಸಿರುಗಟ್ಟಿದಂತಾ ಸ್ಥಿತಿ ನಿಮರ್ಾಣಗೊಂಡ ಘಟನೆ ಶುಕ್ರವಾರ ನಡೆದಿದೆ. ಪುರಸಭೆ ಕೆಲ ತಿಂಗಳ ಹಿಂದೆ ಸ್ವಚ್ಛ ಬಿ.ಸಿ.ರೋಡು ಕಲ್ಪನೆಯಲ್ಲಿ ಬಿ.ಸಿ.ರೋಡಿನ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದ ತ್ಯಾಜ್ಯಗಳನ್ನು ಆಯಾ ದಿನವೇ ತೆರವುಗೊಳಿಸುವುದಾಗಿ ಭರವಸೆ ನೀಡಿತ್ತು. ಅದರಂತೆ ಕೆಲ ದಿನಗಳ ಕಾಲ ನಡೆದುಕೊಂಡಿದ್ದು, ಇದೀಗ ಮತ್ತೆ ಬಿ.ಸಿ.ರೋಡಿಗೆ ಕಸ ಸಮಸ್ಯೆಯಾಗಿದೆ.
ಬಿ.ಸಿ.ರೋಡು ಮುಖ್ಯವೃತ್ತದ ಹತ್ತಿರದಲ್ಲೇ ರಾಶಿಹಾಕಿದ್ದ ತ್ಯಾಜಕ್ಕೆ ಯಾರೋ ಬೆಂಕಿ ಕೊಟ್ಟದ್ದೇ, ಶುಕ್ರವಾರ ಸ್ಥಳೀಯರ ಆತಂಕಕ್ಕೆ ಕಾರಣವಾಯಿತು. ಬೆಂಕಿಯ ತೀವ್ರತೆ ಹೆಚ್ಚಾಗಿ ಹೊಗೆ ದಟ್ಟವಾಗಿ ವ್ಯಾಪಿಸಿತಲ್ಲದೆ, ಸದ್ರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಉಸಿರುಗಟ್ಟಿಸಿದ ಅನುಭವ ನೀಡಿತು. ಆವರಿಸಿದ ಹೊಗೆಯಿಂದ ತಪ್ಪಿಸಿಕೊಳ್ಳಲು ದ್ವಿಚಕ್ರವಾಹನಸವಾರರು ಪರಿತಪಿಸುತ್ತಿದ್ದ ದೃಶ್ಯಗಳು ಕಂಡುಬಂತು. ಇಷ್ಟೆಲ್ಲಾ ಅವಾಂತರ ವಾಗಿದ್ದರೂ, ಪುರಸಭೆಯಾಗಲೀ, ಅಗ್ನಿಶಾಮಕ ದಳವಾಗಲೀ ಈ ತ್ಯಾಜ್ಯ ಬೆಂಕಿಯತ್ತ ಗಮನ ಹರಿಸದಿದ್ದುದೇ ವಿಶೇಷ ವೆನ್ನಿಸಿತು.
3

1

2

By suddi9

Leave a Reply

Your email address will not be published. Required fields are marked *