ಪೊಳಲಿ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕರಿಯಂಗಳ ಶಕ್ತಿ ಕೇಂದ್ರದ ವತಿಯಿಂದ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಕರಿಯಂಗಳ ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಯಿತು.

ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಎಲ್ಲರಿಗೂ ಉಚಿತ ಎಂದು ಹೇಳಿ ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇಂದು ಆರ್ಥಿಕವಾಗಿ ದಿವಾಳಿಯಾಗಿದೆ. ಬಸ್ಗಳಿಗೆ ಡೀಸೆಲ್ ಹಾಕಲೂ ಸಾಧ್ಯವಾಗದ ದುಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿದ್ದು,ಇದೀಗ ಬಸ್ ದರವನ್ನು ಹೆಚ್ಚಿಸಲಾಗಿದೆ. ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಜನರು ಬೇಸತ್ತಿದ್ದು, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
ಜೆಡಿಎಸ್ ಮುಖಂಡ ಅಬೂಬಕ್ಕರ್ ಅಮ್ಮುಂಜೆ ಮಾತನಾಡಿ ಸರಕಾರಕ್ಕೆ ಕಣ್ಣು ಕಾಣುವುದಿಲ್ಲ ಕಿವಿಯೂ ಕೇಳುವುದಿಲ್ಲ ಇಂತಹ ಭ್ರಷ್ಟ ಸರಕಾರವನ್ನು ಕಿತ್ತೋಗೆಯುವ ಕಾಲ ಬಂದಿದೆ ಜನ ವಿರೋದಿ ಸರಕಾರದ ವಿರುದ್ದ ಹೋರಾಟ ಅಗತ್ಯವಿದೆ ಎಂದರು. ಸಭೆಯನ್ನು ಉದ್ದೇಶಿಸಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದೇವಪ್ಪ ಪೂಜಾರಿ ಮಾತನಾಡಿದರು.
ಪ್ರತಿಭಟನೆಯ ವೇಳೆ ಮಹಿಳೆಯರಿಗೆ ಸಿಗುವ ವಿಧವೆವೇತನ, ವೃಧ್ಧಾಪ್ಯ ,ಸಂಧ್ಯಾ ಸುರಕ್ಷಾ, ಮುಂತಾದ ಪಿಂಚಣಿ ಸೌಲಭ್ಯ ರದ್ದುಗೊಳಿಸಿದೆ.
ಪರತಿಭಟನೆಯು ಪೊಳಲಿ ಬಸ್ ನಿಲ್ದಾಣದಿಂದ ಗ್ರಾಮ ಪಂಚಾಯತ್ ಕಚೇರಿವರೆಗೆ ಪಾದಯಾತ್ರೆ ನಡೆಯಿತು. ಬಳಿಕ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಜಿಪಮೂನ್ನುರೂ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವೆಂಕಟೇಶ ನಾವಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಕ್ಷದ ಪ್ರಮುಖರಾದ ರಶ್ಮೀತ್ ಶೆಟ್ಟಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಯಶವಂತ ಪೊಳಲಿ,ಬಿಜೆಪಿ ಮುಖಂಡರಾದ ಲೋಕೇಶ್ ಭರಣಿ, ಚಂದ್ರವತಿ, ಸುಕೇಶ್ ಶೆಟ್ಟಿ,ಚರಣ್ ಬಡಕಬೈಲ್, ಗೋಪಾಲ ಅಂಚನ್ , ಚಂದ್ರಶೇಖರ ಶೆಟ್ಟಿ, ಕಾರ್ತಿಕ್ ಬಲ್ಲಾಳ್, ಯಶೋಧರ ಪೊಳಲಿ, ಮುರಳಿ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು.
