ಬಂಟ್ವಾಳ :ನಾರಾಯಣ ಗುರುಗಳ ಸಂದೇಶ ವಿಶ್ವವ್ಯಾಪಿಯಾಗಿದ್ದು, ಅದು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ಇಡೀ ವಿಶಾಲ ಪ್ರಪಂಚಕ್ಕೆ ಅನ್ವಯಿಸುವಂತಹದ್ದಾಗಿದೆ. ಅವರ ತತ್ವ, ಆದರ್ಶ ಹಾಗೂ ವಿಚಾರಧಾರೆಗಳನ್ನು ಪಾಲಿಸುವುದೇ ನಿಜವಾದ ಗುರುಪೂಜೆ. ಅವರ ವಿಚಾರಧಾರೆಗಳು ನಮ್ಮ ಬದುಕಿಗೆ ಮಾರ್ಗದರ್ಶನವಾಗಿದ್ದು,ನಾರಾಯಣ ಗುರುಗಳನ್ನು ವಿಶ್ವಗುರುವನ್ನಾಗಿ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಿಕ್ಷಕಿ ರೇಣುಕಾ ಕಣಿಯೂರು ಹೇಳಿದರು.

ಪುದು ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆ ಇದರ ಅಶ್ರಯದಲ್ಲಿ ಕುಮ್ಡೇಲ್ ಗುರು ಸದನದಲ್ಲಿ ನಡೆದ ನಾರಾಯಣ ಗುರುಗಳ 172 ನೇ ಜನ್ಮ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಅವರು ಗುರು ಸಂದೇಶ ನೀಡಿದರು.


ಈ ಸಂದರ್ಭದಲ್ಲಿ ನೂತನ ಟ್ರಸ್ಟ್ ನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.ನಾಟಿ ವೈದ್ಯ ಜನಾರ್ದನ ಹೆಚ್. ಎನ್ ಹಾಗೂ ಕ್ರೀಡಾಪಟು ಅನುಶ್ರೀ ಗೋವಿಂದೋಟ ಇವರನ್ನು ಸನ್ಮಾನಿಸಲಾಯಿತು. ನಾಟ್ಯ ಲಹರಿ ತಂಡದ ಭರತ ನಾಟ್ಯ ವಿದ್ಯಾರ್ಥಿಗಳನ್ನು  ಗೌರವಿಸಲಾಯಿತು.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.


ಕಣಚೂರು ಹಾಸ್ಪಿಟಲ್  ರೇಡಿಯೇಷನ್ ಸೇಫ್ಟಿ ಆಫಿಸರ್ ಚೇತನಾ ಪ್ರಶಾಂತ್, ಎಂ ಸ್ ಕೋಟ್ಯಾನ್,ಮುಂಡ ಯಾನೆ ಮೋನಪ್ಪ ಪೂಜಾರಿ,ಸತೀಶ ಪೂಜಾರಿ,ವಿಶ್ವನಾಥ ಸಜೀಪ, ನಾಗಪ್ಪ ಪೂಜಾರಿ ಕಬೇಲ,ನವೀನ್ ಪೂಜಾರಿ,ಗೀತಾ ನವೀನ್ ಪೆಲಪಾಡಿ, ಅಶೋಕ ಹೊಯ್ಗೆಗದ್ದೆ ಮತ್ತಿತರರು ಉಪಸ್ಥಿತರಿದ್ದರು.

ರಾಜೇಶ್ ಕೋಟ್ಯಾನ್ ಸ್ವಾಗತಿಸಿ, ಕಿಶೋರ್ ಸುಜೀರು ಪ್ರಸ್ತಾವನೆಗೈದರು, ಯಶೋದ ಜಯಂತ್, ಸೀತಾ ರಾಜೇಶ್, ಕು ಶ್ರಾವ್ಯ ಸನ್ಮಾನಿತರ ಪಟ್ಟಿ ವಾಚಿಸಿದರು.ಸಚಿನ್ ಕೋಟ್ಯಾನ್ ತುಂಬೆ ವಂದಿಸಿದರು.
ಕುಮಾರಿ ತೃಷಾ ಕಬೇಲ ಕಾರ್ಯಕ್ರಮ ನಿರೂಪಿಸಿದರು.ಕು.ಸುವಿಜ್ನಾ
ಬೃಜೇಶ್ ಅಂಚನ್,ಜಗದೀಶ್ ಪೂಜಾರಿ ಕುಮ್ಡೇಲು, ರಾಜೇಶ್ ಅಂಚನ್  ಸುಜೀರು ಸಹಕರಿಸಿದರು

ಬೆಳಿಗ್ಗೆ ಭಜನಾ ಕಾರ್ಯಕ್ರಮ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು. 

By Suddi9

Leave a Reply

Your email address will not be published. Required fields are marked *