ಬಂಟ್ವಾಳ : ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ವತಿಯಿಂದ  ಬ್ಯಾರಿ ಭಾಷಾ ದಿನಾಚರಣೆಯು ಬಿ.ಸಿ.ರೋಡು – ತಲಪಾಡಿಯ ಡೈಮಂಡ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪತ್ರಕರ್ತ  ಸಂಶುದ್ದೀನ್ ಸಂಪ್ಯ ಮಾತನಾಡಿ,  ತಾಯಿಗೆ ನೀಡುವ ಸ್ಥಾನಮಾನ, ಗೌರವ, ಪ್ರೀತಿಯನ್ನು ನಮ್ಮ ಮಾತೃ ಭಾಷೆಗೂ ನೀಡುವ ಮೂಲಕ ಬ್ಯಾರಿ ಭಾಷೆಯ ಉಳಿವು ಹಾಗೂ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ, ಯಾವುದೇ ಭಾಷೆಯ ಉಳಿವು ಆ ಭಾಷೆಯ ಬಳಕೆಯ ಮೇಲೆ ಅವಲಂಬಿತವಾಗಿದ್ದು,  ವ್ಯವಹಾರಿಕ ಅವಶ್ಯಕತೆಯ ದೃಷ್ಟಿಯಿಂದ ಎಲ್ಲಾ ಭಾಷೆಗಳನ್ನೂ  ಕಲಿಯಬೇಕು. ಆದರೆ ಮನೆಯಲ್ಲಿ ಮಾತೃಭಾಷೆ ಬಳಕೆಯಾದಾಗ ಮಾತ್ರ ಆ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಾಂಗ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.


ಡೈಮಂಡ್ ಇಂಟರ್ನ್ಯಾಷನಲ್ ಸ್ಕೂಲ್ ನ ಸಂಚಾಲಕ ಸಲೀಂ ಅಲ್ತಾಫ್  ಕಾರ್ಯಕ್ರಮ ಉದ್ಘಾಟಿಸಿದರು.ಮಾತನಾಡಿದರು.ಗೋಳ್ತಮಜಲು ಹಜಾಜ್ ಸಮೂಹ ಸಂಸ್ಥೆಗಳ  ಪಾಲುದಾರ ಹಾಜಿ ಜಿ. ಅಹ್ಮದ್ ಮುಸ್ತಫಾ ಶುಭ ಹಾರೈಸಿದರು.ಲೊರೆಟ್ಟೊಪದವು ಇಝ್ಝತುನ್ನೂರು ಯತೀಂ ಖಾನಾ ಇದರ ಕೋಶಾಧಿಕಾರಿ
ಹಂಸ ಪರ್ಲಿಯ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರುಗಳಾದ ಪಿ.ಮಹಮ್ಮದ್ ಪಾಣೆಮಂಗಳೂರು, ಝಕರಿಯಾ ಕಲ್ಲಡ್ಕ, ಸಂಶೀರ್ ಬುಡೋಳಿ,  ಅಖಿಲ ಭಾರತ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಇಕೆಎ ಸಿದ್ದೀಕ್ ಅಡ್ಡೂರುಅತಿಥಿಗಳಾಗಿ ಭಾಗವಹಿಸಿದ್ದರು.


ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಂಚಾಲಕ ಪಿ.ಎ. ರಹೀಂ ಅವರ ಅಧ್ಯಕ್ಷತೆಯಲ್ಲಿ ನಡೆದ ಬ್ಯಾರಿ ಕವಿಗೋಷ್ಠಿಯಲ್ಲಿ ಬ್ಯಾರಿ ಕವಿಗಳಾದ ಎಂ.ಪಿ. ಬಶೀರ್ ಅಹ್ಮದ್ ಬಂಟ್ವಾಳ, ಅಬೂಬಕ್ಕರ್ ಅಮ್ಮುಂಜೆ,  ಆಯಿಷಾ ಯು.ಕೆ., ಆಯಿಷಾ ಪೆರ್ನೆ, ರಝಿಯಾ ಕಾವಳಕಟ್ಟೆ, ಸತ್ತಾರ್ ಗೂಡಿನಬಳಿ, ಸಲೀಂ ಬೋಳಂಗಡಿ, ಹನೀಫ್ ನಂದರಬೆಟ್ಟು, ಸರ್ಫಾಝ್ ಆಲಾಡಿ, ಸಲೀಂ ಮಾಣಿ ಕವನ ವಾಚಿಸಿದರು.


ಅಶ್ರಫ್ ಅಪೋಲೋ ಕಲ್ಲಡ್ಕ ರಶೀದ್ ನಂದಾವರ ಹಾಗೂ ಶರೀಫ್ ಪರ್ಲಿಯ ಇವರಿಂದ ಬ್ಯಾರಿ ಹಾಡುಗಾರಿಕೆ ಕಾರ್ಯಕ್ರಮ ನಡೆಯಿತು.ಇದೇ ವೇಳೆ ಡೈಮಂಡ್ ಇಂಟರ್ನ್ಯಾಷನಲ್ ಸ್ಕೂಲ್ ನ ಟ್ರಸ್ಟಿ ಸನಾ  ಅಲ್ತಾಫ್ ಅವರನ್ನು ಗೌರವಿಸಲಾಯಿತು.


ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ನಂದಾವರ ವಂದಿಸಿದರು.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *