ಬಂಟ್ವಾಳ: ವಿಶ್ವ ಭಾರತಿ ಯಕ್ಷ ಸಂಜೀವಿನಿ (ರಿ)ಮುಡಿಪು ಹಾಗೂ ಕಲಾಶ್ರಯದಾಸಕೋಡಿ ಇವುಗಳ ಸಹಭಾಗಿತ್ವದಲ್ಲಿ” ವಿಶ್ವ ಭಾರತಿ ಯಕ್ಷ ಸಂಭ್ರಮ 900 ಯಕ್ಷ ತ್ರಿವೇಣಿ” ಮೂರು ದಿನಗಳ ಯಕ್ಷಗಾನ  ತಾಳಮದ್ದಳೆಗೆ   ಶುಕ್ರವಾರ ಸಂಜೆ ಚಾಲನೆ ನೀಡಲಾಯಿತು.


ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ತ್ರಿದಿನಗಳ ತಾಳಮದ್ದಳೆಯನ್ನು ಉದ್ಘಾಟಿಸಿ ಯಕ್ಷಗಾನ ಕಲೆ ಪುರಾಣ ಪ್ರಜ್ಞೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ರಾಜ್ಯಧಾರ್ಮಿಕ ಪರಿಷತ್ತು ಮಾಜಿ ಸದಸ್ಯ,ಕೆ.ಸೂರ್ಯನಾರಾಯಣ ಭಟ್ ಅವರು ಸಭಾಧ್ಯಕ್ಷತೆ ವಹಿಸಿ ನಮ್ಮ ಮಣ್ಣಿನ ಹೆಮ್ಮೆಯ ಕಲೆ ಯಕ್ಷಗಾನಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕಾಗಿ ಹೇಳಿದರು ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ, ಯಕ್ಷಗಾನ ಗುರು ರವಿ ಅಲೆ ವೂರಾಯ ಶುಭ ಹಾರೈಸಿದರು.


ಸಂಚಾಲಕ ಪ್ರಶಾಂತ್ ಹೊಳ್ಳ ಪ್ರಸ್ತಾವನೆಗೈದು,ಸ್ವಾಗತಿಸಿದರು. ಕೀರ್ತನ ಹೊಳ್ಳ ಕಾರ್ಯಕ್ರಮ ನಿರೂಪಿಸಿ,ಕೊನೆಯಲ್ಲಿ ವಂದಿಸಿದರು. ಬಳಿಕ ಸರಯು ಯಕ್ಷ ತಂಡ ಕೋಡಿಕಲ್ ಇವರಿಂದ ದಾಸರ ಥಿದರ್ಶನ ಯಕ್ಷಗಾನ ತಾಳಮದ್ದಳೆ ನಡೆಯಿತು.

By Suddi9

Leave a Reply

Your email address will not be published. Required fields are marked *