ಬಂಟ್ವಾಳ : ದಾರಿಮೀಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ 25ನೇ ವಾರ್ಷಿಕ ಬೆಳ್ಳಿಹಬ್ಬ ಹಾಗೂ ಶಂಸುಲ್ ಉಲಮಾ ಆಂಡ್ ನೇರ್ಚೆ ಕಾರ್ಯಕ್ರಮವು ಅ.3 ರಂದು ಮಧ್ಯಾಹ್ನ 2 ಗಂಟೆಗೆ ಬಿ.ಸಿ.ರೋಡ್–ಪಾಣೆಮಂಗಳೂರು ಸಮೀಪದ ಅಕ್ಕರಂಗಡಿಯ ಎಚ್.ಎಚ್. ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಬೆಳ್ಳಿಹಬ್ಬ ಸಮಾವೇಶದ ಸ್ವಾಗತ ಸಮಿತಿ  ಚೇರ್ಮನ್  ಕೆ.ಎಂ.ಖಾಸಿಂ ಧಾರಿಮಿ ಸವಣೂರು ತಿಳಿಸಿದರು.

ಗುರುವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಬಳ್ ಸಮಾವೇಶ ಉದ್ಘಾಟಿಸಲಿದ್ದು, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಹಾಗೂ ಜಾಮಿಅ ದಾರುಸ್ಸಲಾಮ್ ಅಲ್ ಇಸ್ಲಾಮಿಯ್ಯ, ನಂದಿ ಇದರ ಪ್ರಧಾನ ಕಾರ್ಯದರ್ಶಿ ಎ.ವಿ. ಉಸ್ತಾದ್ ಅನುಗ್ರಹ ಭಾಷಣ ಮಾಡಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುಸ್ಸಲಾಮ್ ಉಸ್ತಾದ್ ಮುಖ್ಯ ಭಾಷಣ ಮಾಡಲಿದ್ದಾರೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ  ಹಾಗೂ ಉಸ್ಮಾನುಲ್ ಫೈಝಿ ತೋಡಾರ್  ಅನುಸ್ಮರಣಾ ಭಾಷಣ ಮಾಡಲಿದ್ದಾರೆ.
ಸಯ್ಯಿದ್ ಝೈನುಲ್ ಅಬಿದೀನ್ ಜಿಫ್ರಿ ತಂಬಳ್ ಬೆಳ್ತಂಗಡಿ ದುವಾ ನೆರವೇರಿಸಲಿದ್ದು, ಮಾಹಿನ್ ದಾರಿಮಿ ಮೌಲಿದ್‌ಗೆ ನೇತೃತ್ವ ವಹಿಸುವರು. ಸಯ್ಯದ್ ಅಮೀರ್ ತಂಬಳ್ ಕಿನ್ಯ, ಸಯ್ಯದ್ ಹುಸೈನ್ ಬಾಅಲವೀ ತಂಬಳ್ ಕುಕ್ಕಾಜೆ ಹಾಗೂ ಝುಬೈರ್ ದಾರಿಮಿ ಅಕ್ಕರಂಗಡಿ ಆಶಂಸಾ ಭಾಷಣ ಮಾಡಲಿದ್ದಾರೆ.
ಬೆಳ್ಳಿಹಬ್ಬದ ಅಂಗವಾಗಿ ದಾರಿಮೀಸ್ ಅಸೋಸಿಯೇಶನ್‌ನ ಮಹತ್ವಾಕಾಂಕ್ಷಿ ಯೋಜನೆಯಾದ ‘ದಾರಿಮೀಸ್ ಕ್ಷೇಮನಿಧಿ’ ಯೋಜನೆಗೆ ಸಯ್ಯದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಬಳ್ ಚಾಲನೆ ನೀಡಲಿದ್ದಾರೆ.

ಸಮಾವೇಶಕ್ಕೆ ಮುನ್ನ ಬೆಳ್ಳಿಹಬ್ಬ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಂ. ಖಾಸಿಮ್ ದಾರಿಮಿ ಸವಣೂರು ಹಾಗೂ ಝುಬೈರ್ ದಾರಿಮಿ ಅಕ್ಕರಂಗಡಿ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ.  ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ಗಣ್ಯರು, ಉಲಮಾಗಳು, ದಾರಿಮಿ ವಿದ್ವಾಂಸರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಾರಿಮೀಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಕೆ.ಬಿ. ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿ, ಸ್ವಾಗತ ಸಮಿತಿ ಕನ್ವೀನರ್, ಝುಬೈರ್ ದಾರಿಮಿ ಅಕ್ಕರಂಗಡಿ ಹಾಗೂ ದಾರಿಮೀಸ್ ಉಪಾಧ್ಯಕ್ಷ ಹನೀಫ್ ದಾರಿಮಿ ಸವಣೂರು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *