ಮೂಡುಬಿದರೆ: ಸೇನಿಯ ಬಂಗಾಶ್ ಸಂಗೀತ ಪರಂಪರೆಯ ಸುಪ್ರಸಿದ್ಧ ಬಂಗಾಶ್ ವಂಶದಲ್ಲಿ ಆರನೇ ತಲೆಮಾರಿನ ಕಲಾವಿದರಾಗಿ ಖ್ಯಾತರಾಗಿರುವ ಸರೋದ್ ಮಾಂತ್ರಿಕ ಪದ್ಮಭೂಷಣ ಉಸ್ತಾದ್ ಅಮ್ಜದ್ಆಲಿಖಾನ್ ಅವರಿಗೆ ‘ಆಳ್ವಾಸ್ ವಿರಾಸತ್ 2015’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
mbd_dec20_4(b)

mbd_dec20_4(c)

mbd_dec20_4
ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ನಲ್ಲಿ 8ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಶನಿವಾರ ಸುದ್ದಿಗೋಷ್ಠಿಯಲ್ಲಿದ ತಿಳಿಸಿದ್ದಾರೆ.
ಭಾರತೀಯ ಸರೋದ್ ವಾದನದಲ್ಲಿ ಅದ್ವಿತೀಯ ಸಾಧನೆ ಮಾಡಿದ ತನ್ನ 6ನೇ ವಯಸ್ಸಿನಲ್ಲಿಯೇ ಸರೋದ್ ವಾದನ ಕಚೇರಿ ನೀಡಿದ್ದರು. ಅಮ್ಜದ್ಆಲಿಖಾನ್ ಅವರು ಸಂಗೀತ ಪರಂಪರೆಯ ಕುಟುಂಬದಲ್ಲೇ ಜನಿಸಿದವರು. ತಂದೆ ಹಫೀಜ್ ಆಲಿಖಾನ್ ಅವರ ಸಂಗೀತದ ಗುರು. ಅವರ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿತನ್ನದೇ ಆದ ಸರೋದ್ ವಾದನದ ಮಾಂತ್ರಿಕ ಸ್ಪಶ್ರ್ಯವನ್ನು ಸಂಗೀತ ಲೋಕಕ್ಕೆ ನೀಡಿದವರು.
ದೇಶ ವಿದೇಶಗಳ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಅಮ್ಜದ್ಆಲಿಖಾನ್ ಸಂಗೀತಕ್ಷೇತ್ರದ ಮಹತ್ವದ ಪ್ರಶಸ್ತಿಗಳೆಲ್ಲವೂ ಸಂದಿವೆ. ದೇಶ-ವಿದೇಶಗಳ ಸುಪ್ರಸಿದ್ಧ ಸಂಗೀತ ಕಚೇರಿಗಳಲೆಲ್ಲಾ ತನ್ನ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ದೇಶ-ವಿದೇಶಗಳ ಅನೇಕಾನೇಕ ವಿಶ್ವ ವಿದ್ಯಾನಿಲಯಗಳಲ್ಲಿ ಸಂಗೀತದ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜಗತ್ ಪ್ರಸಿದ್ಧ ವಿದೇಶಿ ವಾದನ ಕಲಾವಿದರೊಂದಿಗೆ ಸರೋದ್ ವಾದನಕಚೇರಿ ನೀಡಿ ಜನಪ್ರಿಯರಾದರು. ಹೊಸ ರಾಗಗಳ ಅನ್ವೇಷಕರಾಗಿ ಸಂಗೀತಕ್ಷೇತ್ರಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ .’ದಿ ವಲ್ಡ್ಆಫ್ಅಮ್ಜದ್ಆಲಿಖಾನ್’ ಮತ್ತು’ಅಬ್ಬಾಗೋಡ್ಸ್ ಗ್ರೇಟೆಸ್ಟ್ ಗಿಫ್ಟ್ ಟು ಅಸ್’ ಎಂಬ ಎರಡು ಗ್ರಂಥಗಳು ಅಮ್ಜದ್ ಆಲಿಖಾನ್ ಅವರ ಪರಿಚಯ ಮಾಡಿಕೊಡುತ್ತವೆ.
ಸರೋದ್ ವಾದನದ ಮೂಲಕ ಪ್ರೀತಿ ಮತ್ತು ಶಾಂತಿಯನ್ನು ಮನಸ್ಸಿಗೆ ನೀಡುವ ಸರೋದ್ ಮಾಂತ್ರಿಕ ಅಮ್ಜದ್ಆಲಿಖಾನ್ ಅವರು ವೇದಿಕೆಯಲ್ಲೂ, ವೇದಿಕೆಯ ಹೊರಗೂ ಅದೇ ರೀತಿ ಬದುಕ ಬಯಸುವವರು. ಖ್ಯಾತ ಭರತನಾಟ್ಯ ಕಲಾವಿದೆ ಶುಭಲಕ್ಷ್ಮೀಖಾನ್ ಅವರಿಗೆದಾಂಪತ್ಯದ ಫಲವಾಗಿ ಅಮನ್ಆಲಿಖಾನ್ ಹಾಗೂ ಆಯಾನ್ಆಲಿಖಾನ್ ಎಂಬ ಈರ್ವರು ಸುಪುತ್ರರನ್ನು ಪಡೆದು ಸಂಗೀತಕ್ಷೇತ್ರಕ್ಕೆತನ್ನ ಮನೆತನದ ಏಳನೇ ತಲೆಮಾರಿನಕೊಂಡಿಯಾಗಿ ಸೇರ್ಪಡೆಗೊಳಿಸಿದ್ದಾರೆ. ಶಾಸ್ತ್ರೀಯ ಸಂಗೀತ ಕ್ಷೇತ್ರದ ದಂತಕತೆ, ಸರೋದ್ ಮಾಂತ್ರಿಕ ಪದ್ಮವಿಭೂಷಣ ಉಸ್ತಾದ್ಅಮ್ಜದ್ ಆಲಿಖಾನ್ರವರಿಗೆ ಆಳ್ವಾಸ್ ವಿರಾಸತ್- 2015ರ ಪ್ರತಿಷ್ಠಿತ ಪ್ರಶಸ್ತಿಯನ್ನು ಒಂದು ಲಕ್ಷ ನಗದಿನೊಂದಿಗೆ ನೀಡಿಗೌರವಿಸಲಾಗುತ್ತದೆ ಎಂದು ಡಾ.ಆಳ್ವ ತಿಳಿಸಿದರು.
ಆಳ್ವಾಸ್ನ ಮಾಧ್ಯಮ ಸಂಪಕರ್ಾಧಿಕಾರಿ ಡಾ.ಪದ್ಮನಾಭ ಶೆಣೈ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *