ಮೂಡುಬಿದರೆ: ಮಂಗಳೂರು ವಿ.ವಿ ಅಂತರ್ ಕಾಲೇಜು 34 ಕ್ರೀಡಾಕೂಟ ಸ್ವರಾಜ್ಯ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡಿದ್ದು, ಮಹಿಳೆಯರ ಹಾಗೂ ಪುರಷರ ಎರಡೂ ವಿಭಾಗಗಳಲ್ಲಿ ತಂಡ ಪ್ರಶಸ್ತಿ ಪಡೆದ ಆಳ್ವಾಸ್ ಕಾಲೇಜು ತಂಡ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸತತ 12ನೇ ಬಾರಿಗೆ ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ ಲಭಿಸಿದ್ದು, ಈ ರೀತಿಯ ಸಾಧನೆ ಮಾಡಿದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೂಟದ ಪುರುಷರ ವಿಭಾಗದಲ್ಲಿ 139 ಅಂಕ ಮತ್ತು ಮಹಿಳೆಯರ ವಿಭಾಗದಲ್ಲಿ 135 ಅಂಕ ಸೇರಿದಂತೆ ಒಟ್ಟು 274 ಅಂಕಗಳನ್ನು ಅಳ್ವಾಸ್ ತಂಡ ಪಡಕೊಂಡಿದೆ. ಆಳ್ವಾಸ್ ಮಹಿಳಾ ತಂಡ ಪ್ರಶಸ್ತಿಗಾಗಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಪಯರ್ಾಯ ಫಲಕ ಮತ್ತು ಆಳ್ವಾಸ್ನ ಪುರುಷರ ತಂಡ ಪ್ರಶಸ್ತಿಗಾಗಿ ಸೈಂಟ್ ಪಿಲೋಮಿನ ಪಯರ್ಾಯ ಫಲಕ ಪಡೆದುಕೊಂಡಿದೆ. ರನ್ನರ್ ಪ್ರಶಸ್ತಿಯನ್ನು ಎಸ್ಡಿಎಂ ಉಜಿರೆ ಪಡೆದುಕೊಂಡಿದೆ.

20 ಕೂಟ ದಾಖಲೆ ಮೂರು ದಿನಗಳಲ್ಲಿ ನಿಮರ್ಾಣವಾದ ಒಟ್ಟು 20 ಕೂಟ ದಾಖಲೆಗಳ ಪೈಕಿ 18 ದಾಖಲೆಗಳು ಅಳ್ಚಾಸ್ ಪಾಲಾಗಿದ್ದು ಮಂಗಳೂರು ವಿವಿ ಕ್ರೀಡಾ ಕೂಟದಲ್ಲಿ ಕಳೆದ ವರ್ಷ ದಾಖಲಾಗಿದ್ದ 12 ಕೂಟ ದಾಖಲೆಯನ್ನು ಈ ಸ್ಪಧರ್ೆ ಮುರಿದಿದೆ. ಆಳ್ವಾಸ್ನ ಶ್ರೀನಿತ್ ಮೋಹನ್(ಹೈಜಂಪ್)ಮತ್ತು ಪ್ರಿಯಾಂಕ(100ಮೀ)ಕೂಟದ ಬೆಸ್ಟ್ ಅಥ್ಲೆಟ್ಸ್ ಪ್ರಶಸ್ತಿ ಪಡೆದುಕೊಂರು.
mbd_dec18_1.(Bharat)

mbd_dec18_1.(priyanka)

mbd_dec18_1.( 20n recored)

mbd_dec18_1.( Champion)

9 ಕೂಟ ದಾಖಲೆಗಳು:
ಪುರುಷರ ವಿಭಾಗದ ಹ್ಯಾಮರ್ ತ್ರೋನಲ್ಲಿ ಆಳ್ವಾಸ್ನ ಖಸೀಮ್ 55.27 ಮೀ ದೂರ ಎಸೆದು ಕಳೆದ ಸಾಲಿನ ತನ್ನ ಹಳೆಯ ದಾಖಲೆ 53.02 ಅನ್ನು ಉತ್ತಮ ಪಡಿಸಿಕೊಂಡರೆ ಹಾಫ್ ಮ್ಯಾರಥನ್ನಲ್ಲಿ ಆಳ್ವಾಸ್ನ ಶಿಜು ಸಿ.ಪಿ 1:05.02.7 ಸೆಕೆಂಡ್ಸ್ನಲ್ಲಿ ಕ್ರಮಿಸಿ ಅದೇ ಕಾಲೇಜಿನ ಗುರುನಾಥ್ ಕಲ್ಯಾಣಿ ಹೆಸರಿನ 2006-07ರ 1.07.35 ದಾಖಲೆಯನ್ನು ಮುರಿದಿದ್ದಾರೆ. 1500 ಮೀ ಓಟವನ್ನು ಆಳ್ವಾಸ್ನ ಭರತ್ 3.58.9 ಸೆಕೆಂಡ್ಸ್ನಲ್ಲಿ ಕ್ರಮಿಸಿ ಅದೇ ಕಾಲೇಜಿನ ಅಶೋಕ್ ಹೆಸರಿನಲ್ಲಿ ಕಳೆದ ವರ್ಷ ದಾಖಲಾಗಿದ್ದ 3.59.8 ಸೆಕೆಂಡ್ಸ್ ದಾಖಲೆಯನ್ನು ಅಳಿಸಿದ್ದಾರೆ. ತ್ರಿಪಲ್ ಜಂಪ್ನಲ್ಲಿ ಆಳ್ವಾಸ್ನ ಕಾತರ್ಿಕ್ ಬಸಂಗೊಂಡಪ್ಪ 14.70 ಮೀ.ದೂರ ಜಿಗಿದು ಅದೇ ಕಾಲೇಜಿನ ಶಂಶೀರ್ ಎಸ್.ಇ ಹೆಸರಿನಲ್ಲಿ 2012-13ರಲ್ಲಿ ಇದ್ದ 14.48 ದಾಖಲೆಯನ್ನು ಮುರಿದಿದ್ದಾರೆ. 4*400 ಮೀ ರಿಲೇಯನನ್ನು ಆಳ್ವಾಸ್ ತಂಡ 3.20.5 ಸೆಕೆಂಡ್ಸ್ನಲ್ಲಿ ಕ್ರಮಿಸಿ 2007-08ರಲ್ಲಿ ತನ್ನದೇ ಹೆಸರಿನಲ್ಲಿದ್ದ 3.22.7 ಸೆ.ದಾಖಲೆಯನ್ನು ಅಳಿಸಿದೆ.

ಮಹಿಳೆಯರ ವಿಭಾಗದ ಕೂಟ ದಾಖಲೆ:ಹಾಫ್ ಮ್ಯಾರಥಾನಲ್ಲಿ ಆಳ್ವಾಸ್ನ ಅರ್ಚನಾ ಕೆ.ಎಂ 1.21.11.8 ಸೆಕೆಂಡ್ಸ್ನಲ್ಲಿ ಕ್ರಮಿಸಿ ತನ್ನದೇ ಸಂಸ್ಥೆಯ ಸಬೀನಾ ಅವರ 2011-12ರಲ್ಲಿದ್ದ 1.21.21.0 ಸೆಕೆಂಡ್ಸ್ ದಾಖಲೆ ಮುರಿದರೆ, ಪೋಲ್ ವಾಲ್ಟ್ನಲ್ಲಿ ಆಳ್ವಾಸ್ನ ಕೃಷ್ಣಾ ರಚನಾ 3.50 ಮೀ. ಎತ್ತರ ಜಿಗಿದು ಆಳ್ವಾಸ್ನ ದುವಾ ಕೆ.ಸಿ ಹೆಸರಿನಲ್ಲಿ 2011-12ರಲ್ಲಿ ದಾಖಲಾಗಿದ್ದ 3.20 ಮೀ ದಾಖಲೆಯನ್ನು ಅಳಿಸಿದ್ದಾರೆ. 200 ಮೀ ಓಟವನ್ನು ಆಳ್ವಾಸ್ನ ಪ್ರಿಯಾಂಕ ಎಸ್.ಕಲಗಿ 24.9 ಸೆಕೆಂಡ್ಸ್ನಲ್ಲಿ ಗುರಿಮುಟ್ಟಿ ಅಂತರಾಷ್ಟ್ರೀಯ ಕ್ರೀಡಾಪಟು ವಂದನಾ ರಾವ್ ಅವರ ಹೆಸರಿನಲ್ಲಿ 1983-84ರಿಂದ ಉಳಿದುಕೊಂಡಿದ್ದ 49.2 ಸೆ. ದಾಖಲೆಯನ್ನು ಮುರಿದು ಕೂಟದ ಗಮನ ಸೆಳೆದರು. 4*100 ರಿಲೇಯನ್ನು ಆಳ್ವಾಸ್ ತಂಡ 47.9 ಸೆಕೆಂಡ್ಸ್ನಲ್ಲಿ ಕ್ರಮಿಸಿ ತನ್ನದೆ 2013-14ರ ದಾಖಲೆಯನ್ನು ಮುರಿದಿದೆ.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ.ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಎಸ್ಡಿಎಂ ಸೊಸೈಟಿಯ ಕಾರ್ಯದಶರ್ಿ ಡಾ.ಬಿ.ಯಶೋವರ್ಮ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ವಿತರಿಸಿದರು. ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ, ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿದರ್ೇಶಕ ಡಾ.ಕಿಶೋರ್ ಕುಮಾರ್, ವಿವಿಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿದರ್ೇಶಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ನ ದೈಹಿಕ ಶಿಕ್ಷಣ ನಿದರ್ೇಶಕ ತಿಲಕ್ ಶೆಟ್ಟಿ ವಂದಿಸಿದರು.

ಕೊನೆಯ ದಿನದ ಫಲಿತಾಂಶ
ಮಹಿಳಾ ವಿಭಾಗ:
ಹಾಫ್ ಮ್ಯಾರಥನ್- ಅರ್ಚನಾ.ಕೆ.ಎಂ, ಆಳ್ವಾಸ್( ಪ್ರ), ಕವಿತಾ.ವಿ.ಎಚ್, ಆಳ್ವಾಸ್(ದ್ವಿ), ಶ್ರೇಯಾ.ಎ., ಆಳ್ವಾಸ್(ತೃ)
1500ಮೀ- ಸುಪ್ರೀತಾ.ಬಿ.ಕೆ, ಆಳ್ವಾಸ್(ಪ್ರ), ಪೂಣರ್ಿಮಾ.ಸಿ.,ಆಳ್ವಾಸ್(ದ್ವಿ), ರಾಣಿ.ಕೆ.ಬಿ, ಉಜಿರೆ ಎಸ್ಡಿಎಂ(ತೃ),
ಜಾವಲಿನ್ ತ್ರೋ- ರಶ್ಮಿ.ಕೆ, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು(ಪ್ರ), ಚೇತನಾ.ಎ.ಡಿ, ಆಳ್ವಾಸ್(ದ್ವಿ), ದೀಕ್ಷಾ, ಉಪ್ಪಿನಂಗಡಿ ಸಕರ್ಾರಿ ಪ್ರ.ದ. ಕಾಲೇಜು(ತೃ)
ಪೋಲ್ ವಾಲ್ಟ್- ಕೃಷ್ಣಾ ರಚನ್, ಆಳ್ವಾಸ್ (ಪ್ರ), ಸೌಮ್ಯಶ್ರೀ, ಆಳ್ವಾಸ್(ದ್ವಿ),
ಟ್ರಿಪಲ್ ಜಂಪ್ – ಶಿಲ್ಪಾ ಚಾಕೋ, ಆಳ್ವಾಸ್(ಪ್ರ), ಪ್ರಿಯಾ.ಎ, ಉಜಿರೆ ಎಸ್ಡಿಎಂ(ದ್ವಿ), ಜೋಲಿ.ವಿ.ಎಂ, ಆಳ್ವಾಸ್ ದೈ.ಶಿ.ಕಾಲೇಜು (ತೃ),
ಹೆಪತ್ಲಾನ್-ಚಾಂದಿನಿ.ಬಿ.ವಿ, ಆಳ್ವಾಸ್( ಪ್ರ), ರೋಜಾ.ಎಚ್.ಸಿ, ಉಜಿರೆ ಎಸ್ಡಿಎಂ(ದ್ವಿ), ಶಾಂತ, ಉಜಿರೆ ಎಸ್ಡಿಎಂ(ತೃ)
200 ಮೀ-ಪ್ರಿಯಾಂಕ.ಎಸ್.ಕಲಗಿ, ಆಳ್ವಾಸ್( ಪ್ರ), ವಷರ್ಾ.ಆರ್, ಮಂಗಳೂರು ಸೈಂಟ್ ಅಲೋಶಿಯಸ್(ದ್ವಿ), ನಿಶ್ಚಿತಾ.ಎಸ್.ಎಸ್, ಉಜಿರೆ ಎಸ್ಡಿಎಂ(ತೃ)
4*100 ಮೀ.ರಿಲೇ- ಆಳ್ವಾಸ್ ಮೂಡುಬಿದರೆ(ಪ್ರ), ಎಸ್ಡಿಎಂ ಉಜಿರೆ(ದ್ವಿ), ಮಂಗಳೂರು ವಿ.ವಿ.ಕ್ಯಾಂಪಸ್(ತೃ)
4*400 ಮೀ.ರಿಲೇ-ಆಳ್ವಾಸ್ ಮೂಡುಬಿದರೆ(ಪ್ರ), ಎಸ್ಡಿಎಂ ಉಜಿರೆ(ದ್ವಿ), ಮಂಗಳೂರು ವಿ.ವಿ.ಕ್ಯಾಂಪಸ್(ತೃ).
ಪುರುಷರ ವಿಭಾಗ:
ಹ್ಯಾಮರ್ ತ್ರೊ- ಕಾಸಿಂ, ಆಳ್ವಾಸ್(ಪ್ರ), ಸಿದ್ದಾಥರ್್.ಎಸ್.ಪುತ್ರನ್, ಮಂಗಳೂರು ಎಸ್ಡಿಎಂ ಬಿಬಿಎಂ ಕಾಲೇಜು(ದ್ವಿ), ಪ್ರವೀಣ್, ಆಳ್ವಾಸ್(ತೃ)
ಹ್ಯಾಫ್ ಮ್ಯಾರಥನ್- ಶಿಜು.ಸಿ.ಪಿ, ಆಳ್ವಾಸ್(ಪ್ರ), ದೇವಣ್ಣ ನಾಕ್, ಮಂ.ವಿ.ವಿ ಕ್ಯಾಂಪಸ್(ದ್ವಿ), ಶಿವಾನಂದ ಭಾಸ್ಕರ್ ನಾಕ್, ಆಳ್ವಾಸ್(ತೃ)
1500ಮೀ- ಭರತ್, ಆಳ್ವಾಸ್(ಪ್ರ), ನವೀನ್ ಗೌಡ, ಆಳ್ವಾಸ್(ದ್ವಿ), ಕಿಶೋರ್.ಕೆ.ಟಿ, ಉಜಿರೆ ಎಸ್ಡಿಎಂ(ತೃ),
ಜವಲಿನ್ ತ್ರೋ- ಸಂಶೀರ್.ಎಸ್.ಇ, ಆಳ್ವಾಸ್(ಪ್ರ), ವೇಣು ಪ್ರಸಾದ್ ಯು.ಎಲ್, ಉಜಿರೆ ಎಸ್ಡಿಎಂ(ದ್ವಿ), ಶ್ರೀಧರ, ಬ್ರಹ್ಮಾವರ ಎಸ್ಎಂಎಸ್(ತೃ)
ಟ್ರಿಪಲ್ ಜಂಪ್- ಕಾತರ್ಿಕ್.ಬಿ., ಆಳ್ವಾಸ್(ಪ್ರ), ವಿನೋದ್.ವಿ.ನಾಕ್, ಉಜಿರೆ ಎಸ್ಡಿಎಂ(ದ್ವಿ), ಅಲಿಸ್ಟನ್ ಕೊರೆಯಾ, ನಿಟ್ಟೆ ಪ್ರ.ದ.ಕಾಲೇಜು(ತೃ)
ಪೋಲ್ ವಾಲ್ಟ್-ನಿಜಿಲ್ ಜಾಕ್ಸನ್,ಆಳ್ವಾಸ್(ಪ್ರ), ಕೃಷ್ಣಪ್ಪ, ಆಳ್ವಾಸ್(ದ್ವಿ)
200ಮೀ- ಗೌರೀಶ್.ಎನ್.ಬಿ, ಆಳ್ವಾಸ್(ಪ್ರ), ಮಹಮ್ಮದ್ ಶೇರ್ಶಾದ್, ಆಳ್ವಾಸ್(ದ್ವಿ), ಸಿದ್ಧರಾಜು ಆರ್, ಮಂ.ವಿ.ವಿ.ಕ್ಯಾಂಪಸ್(ತೃ)
ಡೆಕತ್ಲಾನ್-ನಾಗೇಂದ್ರ ಪ್ರಸಾದ್.ಎಸ್, ಆಳ್ವಾಸ್(ಪ್ರ), ಪುನೀತ್, ಉಜಿರೆ ಎಸ್ಡಿಎಂ(ದ್ವಿ), ಸುನೀಲ್.ಪಿ.ಎಲ್., ಉಜಿರೆ ಎಸ್ಡಿಎಂ (ತೃ)
4*100 ರಿಲೇ-ಆಳ್ವಾಸ್ ಮೂಡುಬಿದರೆ(ಪ್ರ), ಮಂ.ವಿ.ವಿ. ಕ್ಯಾಂಪಸ್(ದ್ವಿ), ಆಳ್ವಾಸ್ ದೈ.ಶಿ.ಕಾಲೇಜು(ತೃ)
4*400 ರಿಲೇ-ಆಳ್ವಾಸ್ ಮೂಡುಬಿದರೆ(ಪ್ರ), ಮಂ.ವಿ.ವಿ. ಕ್ಯಾಂಪಸ್(ದ್ವಿ), ಎಸ್ಡಿಎಂ ಉಜಿರೆ(ತೃ)
ಎಂಬಿಡಿ_ಡಿಸೆಂಬರ್18_1( ಚಾಂಪಿಯನ್)
ಮಂಗಳೂರು ವಿ.ವಿ.ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಆಳ್ವಾಸ್
ಎಂಬಿಡಿ_ಡಿಸೆಂಬರ್18_1(ಪ್ರಿಯಾಂಕ)
ಎಂಬಿಡಿ_ಡಿಸೆಂಬರ್18_1( ಭರತ್)
ಎಂಬಿಡಿ_ಡಿಸೆಂಬರ್18_1( 20 ರೆಕಾಡರ್್)

By suddi9

Leave a Reply

Your email address will not be published. Required fields are marked *