ಬಂಟ್ವಾಳ: ಸರಪಾಡಿಯ ಮಾವಿನಕಟ್ಟೆದಲ್ಲಿ ಕಡುಬಡತನದಲ್ಲಿರುವ ಭವಾನಿ ಶೆಟ್ಟಿಯವರಿಗೆ ಬೊಳಂತೂರುಗುತ್ತು ಸಂಜೀವ ಶೆಟ್ಟಿ ಬಿ.ಸಿ.ರೋಡು ಅವರ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ನಿರ್ಮಾಣಗೊಂಡ ನೂತನ ಮನೆಯ ಹಸ್ತಾಂತರ ಸಮಾರಂಭ ಮಾವಿನಕಟ್ಟೆ ಬಾಚಕೆರೆಯಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನೆ ನಿರ್ಮಾಣದ ರೂವಾರಿ ಬೊಳಂತೂರುಗುತ್ತು ಸಂಜೀವ ಶೆಟ್ಟಿ ಅವರು ಮಾತನಾಡಿ, ತೀರಾ ಬಡತನದಲ್ಲಿ ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದ ಭವಾನಿ ಶೆಟ್ಟಿ ಅವರಿಗೆ ಸುಮಾರು ೯ ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿದ್ದು, ಒಂದಷ್ಟು ದಾನಿಗಳು ಈ ಕಾರ್ಯಕ್ಕೆ ನೆರವು ನೀಡಿದ್ದಾರೆ. ಕಷ್ಟದಲ್ಲಿರುವವರಿಗೆ ಇಂತಹ ನೆರವು ನೀಡಿದಾಗ ಅದಕ್ಕೆ ದೇವರ ಅನುಗ್ರಹವೂ ಪ್ರಾಪ್ತಿಯಾಗುತ್ತದೆ ಎಂದರು.


ಮುಂಬೈ ಉದ್ಯಮಿ ರಘು ಎಲ್.ಶೆಟ್ಟಿ ಬೆಳ್ಳೂರು, ಬಿ.ಸಿ.ರೋಡಿನ ಹಿರಿಯ ನ್ಯಾಯವಾದಿ ಅಶ್ವನಿಕುಮಾರ್ ರೈ, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಗಳಾದ ಕುಡ್ಪಿ ಅರವಿಂದ್ ಶೆಣೈ, ಡಾ.ಗೀತ್ ಪ್ರಕಾಶ್, ಪ್ರಥಮ ಉಪಗನರ್ನರ್ ಗೋವರ್ಧನ್ ಶೆಟ್ಟಿ, ಮಂಗಳೂರಿನ ಉದ್ಯಮಿ ರಿಯಾಜ್ ರೆಕ್ಸಿಡಿ, ಸರಪಾಡಿ ವಲಯ ಬಂಟರ ಸಂಘದ ಗೌರವ ಸಲಹೆಗಾರ ಮೋಹನದಾಸ ಶೆಟ್ಟಿ ಮುನ್ನಲಾಯಿಗುತ್ತು, ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಪ್ರಸ್ತಾವನೆಗೈದರು. ಪ್ರಕಾಶ್ಚಂದ್ರ ಆಳ್ವ ಪಡ್ಡಾಯಿಬೆಟ್ಟು ವಂದಿಸಿದರು. ರಾಧಾಕೃಷ್ಣ ರೈ ಕೊಟ್ಟುಂಜ ಕಾರ್ಯಕ್ರಮ ನಿರ್ವಹಿಸಿದರು

By Suddi9

Leave a Reply

Your email address will not be published. Required fields are marked *