ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಸೇವಾ ಸಂಕಲ್ಪ ಯೋಜನೆಯಡಿ ಪಂಜಿಕಲ್ಲು ಗ್ರಾಮದ ಕೊಂಬರ ಬೈಲು ಬಸ್ ತಂಗುದಾಣ ಬಳಿ ಸ್ವಚ್ಛತಾ ಆಂದೋಲನ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಪಂಜಿಕಲ್ಲು ಬಿಜೆಪಿ ಶಕ್ತಿ ಕೇಂದ್ರ ಮತ್ತು ಹಿಂದುಳಿದ ಮೋರ್ಚ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ರಸ್ತೆ ಬದಿ ಹುಲ್ಲು ಕಟಾವು ಸಹಿತ ಗಿಡ ನೆಡುವ ಕಾರ್ಯಕ್ರಮ ಹಾಗೂ ಬಸ್ ತಂಗುದಾಣ ತೊಳೆದು ಶುಚಿಗೊಳಿಸಲಾಯಿತು.
ಇದೇ ವೇಳೆ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ ಕೊಂಬರಬೈಲು ಇವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮ ವೀಕ್ಷಿಸಲಾಯಿತು.
ಕ್ಷೇತ್ರ ಬಿಜೆಪಿ ಕೋಶಾಧಿಕಾರಿ, ಪಂಜಿಕಲ್ಲು ಶಕ್ತಿ ಕೇಂದ್ರ ಪ್ರಭಾರಿ ಬಿ.ದಿನೇಶ್ ಭಂಡಾರಿ, ಶಕ್ತಿಕೇಂದ್ರ ಅಧ್ಯಕ್ಷ ಲಕ್ಷ್ಮಿನಾರಾಯಣ ಗೌಡ, ಹಿಂದುಳಿದ ಮೋಚರ್ಾ ಸದಸ್ಯರಾದ ಕೇಶವ ಪೂಜಾರಿ, ಬೂತ್ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ, ಕಾರ್ಯದಶರ್ಿ ಹರೀಶ್ ಶೆಟ್ಟಿ, ಯತಿನ್, ಮೋಹನದಾಸ್, ಪ್ರಮುಖರಾದ ನಾರಾಯಣ ಭಂಡಾರಿ, ಜಯ ಕುಂದರ್ ಬಾಲೇಶ್ವರ, ಮೋನಪ್ಪ ಪೂಜಾರಿ, ಅರುಣ್ ಗೌಡ, ತೇಜಸ್, ನಾರಾಯಣ ಸಪಲ್ಯ, ಧನುಷ್, ಪ್ರವೀಣ್ ಪಟ್ರಾಡಿ, ರವೀಂದ್ರ ಪಟ್ರಾಡಿ, ಪ್ರಕಾಶ್ ಪೂಜಾರಿ, ದಿನೇಶ್ ಪಟ್ರಾಡಿ, ರಾಜೇಶ್ ನಡಾಯಿ, ಕೇಶವ ಕುಲಾಲ್ ಮತ್ತಿತರರು ಇದ್ದರು.
