ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಮುಖ್ಯಸ್ಥರಾಗಿ ಶಿಕ್ಷಣ, ಸಾಮಾಜಿಕ ,ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕರಾವಳಿ  ಮಾತ್ರವಲ್ಲ  ರಾಜ್ಯದ ಜನರ ಮನಸಿನಲ್ಲಿ ಅತ್ಯಂತ ಗೌರವದ ಸ್ಥಾನ ಪಡೆದಿರುವ ಡಾ| ಪ್ರಭಾಕರ ಭಟ್ ಅವರಿಗೆ ಒಂದು ವರುಷದ ಹಳೆಯದಾದ ತನಿಖೆಯ ಹಂತವನ್ನು ದಾಟಿರುವ ರಹಿಮಾನ್ ಕೊಲೆ ಪ್ರಕರಣದಲ್ಲಿ ಈಗ ಪೊಲೀಸರು ನೋಟಿಸು ನೀಡಿರುವುದು  ಖಂಡನೀಯವಾಗಿದೆ ಎಂದು ಬಿಜೆಪಿಯ ರಾಜ್ಯ ನಾಯಕಿ ಸುಲೋಚನಾ ಜಿ.ಕೆ. ಭಟ್ ತಿಳಿಸಿದರು.

 

ತನಿಖೆಯ ಎಲ್ಲಾ ಮಜಲುಗಳನ್ನು ದಾಟಿ ಅಂತಿಮವಾಗಿ ಪ್ರಕರಣದಲ್ಲಿ ನ್ಯಾಯಾಲಯಕ್ಕ ಆರೋಪಪಟ್ಟಿ ಸಲ್ಲಿಕೆಯಾದ ಬಳಿಕವು ಈ ಕೊಲೆ ಕೇಸಿಗೆ ಸಂಬಂಧ ಪಡೆದ ಹಿಂದೂ ಕಾರ್ಯಕರ್ತ ಭರತ್ ಕುಮ್ಡೇಲು ಮತ್ತು ಇತರರ ಮೇಲೆ ಕೋಕ ಕಾಯಿದೆ ಹಾಕಿ ಇದಕ್ಕೆ ಮೈಸೂರಿನ ವಿಶೇಷ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬರುತ್ತಿದ್ದಂತೆ ರಾಜ್ಯಸರಕಾರ  ಪೊಲೀಸರನ್ನು ದುರುಪಯೋಗಪಡಿಸಿಕೊಂಡು ಒಂದು ವರ್ಗದ ಓಲೈಕೆಗಾಗಿ  ಗೂಂಡಾ ಕಾಯ್ದೆಯನ್ನು ಹಾಕಿ ಜೈಲಿನಿಂದ ಹೊರಬಾರದಂತೆ ತಡೆ ಒಡ್ಡಿರುವಯದು ನ ನೀಚತನದ ಪರಮಾವಧಿಯಾಗಿದೆ ಎಂದು ಅವರು ಪ್ರಕಟಣೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಭಾವನೆಗಳ ಮೇಲೆ ಆಡಳಿತ ಮಾಡುವುದಿಲ್ಲ ಎನ್ನುವ ಮುಖ್ಯಮಂತ್ರಿಗಳು ಕರಾವಳಿ ಜನರ ಭಾವನೆಯನ್ನೇ ಕೆರಳಿಸುವ ಕಾರ್ಯವನ್ನು  ಮಾಡುತ್ತಿರುವುದನ್ನು ಕಟು ಶಬ್ದಗಳಿಂದ ಖಂಡಿಸಿರುವ ಸುಲೋಚನಾ ಭಟ್ ಅವರು.
ಮುಂದಿನ ದಿನಗಳಲ್ಲಿ ಹಿಂದೂ ಶಕ್ತಿ ಇದಕ್ಕೆ ತಕ್ಕ ಉತ್ತರ ನೀಡಲಿದೆ  ಎಂದು  ತಿಳಿಸಿದ್ದಾರೆ. 

By Suddi9

Leave a Reply

Your email address will not be published. Required fields are marked *