ಬಂಟ್ವಾಳ  :ತಾಲೂಕಿನ  ಸರಪಾಡಿ ಮಾವಿನಕಟ್ಟೆಯ ಕಡು ಬಡತನದಲ್ಲಿರುವ ಭವಾನಿ ಶೆಟ್ಟಿ ಎಂಬವರಿಗೆ ಬೋಳಂತೂರು ಗುತ್ತು ಸಂಜೀವ ಶೆಟ್ಟಿ ಬಿ.ಸಿ.ರೋಡು ಇವರ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ನೂತನವಾಗಿ ನಿರ್ಮಾಣಗೊಂಡ ಮನೆಯ ಹಸ್ತಾಂತರ ಸಮಾರಂಭವು ಸ.
26 ರಂದು ಸರಪಾಡಿ  ಬಾಚಕೆರೆ ದೇವಸ್ಥಾನದ ಬಳಿ ನಡೆಯಲಿದೆ ಎಂದು  ಲಯನ್ ಸಂಜೀವ ಶೆಟ್ಟಿ ತಿಳಿಸಿದರು.

ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ, ಮುಂಬಯಿ ಉದ್ಯಮಿ ರಘು ಎಲ್.ಶೆಟ್ಟಿ, ಲ. ಕುಡ್ಪಿ ಅರವಿಂದ ಶೆಣೈ, ಲ. ಡಾ|ಗೀತಾ ಪ್ರಕಾಶ್, ಲ. ಗೋವರ್ಧನ ಶೆಟ್ಟಿ,ಉದ್ಯಮಿ ಸೀತಾರಾಮ ರೈ ಸವಣೂರು, ಲ ರಿಯಾಝ್ ರೆಕ್ಸಿಡಿ, ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ,  ಉದ್ಯಮಿ ವಿಶ್ವನಾಥ ಶೆಟ್ಟಿ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಶೋಕ್ ಶೆಟ್ಟಿ ಸರಪಾಡಿ, ಲ ರಿಯಾಝ್ ರೆಕ್ಸಿಡಿ,ವಸಂತ ಆಳ್ವ ಉಪಸ್ಥಿತರಿದ್ದರು 

By Suddi9

Leave a Reply

Your email address will not be published. Required fields are marked *