ಬಂಟ್ವಾಳ: ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ರ ಸಾಣೂರು ಬಳಿ ಕಾರು ಮತ್ತು ಬಸ್  ಅಪಘಾತದದಿಂದ ಮಾಜಿ ಸಚಿವರಾದ ರಮಾನಾಥ ರೈ ಅವರು ಗಾಯಗೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿ ವಿಕೃತಿ ಮೇರೆದ ವ್ಯಕ್ತಿಯೋರ್ವನ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ‌ಕುಂದರ್ ಅವರ ದೂರಿನಂತೆ ಪ್ರಭಾಕರ ಹೆಗ್ಡೆ ಎಂಬಾತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.ಭಾನುವಾರ ಸಂಜೆ ಸಾಣೂರು ಬಳಿ ಮಾಜಿ ಸಚಿವ ರಮಾನಾಥ ರೈ ಅವರ ಕಾರಿಗೆ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು,ರಮಾನಾಥ ರೈ ಸಹಿತ ಅವರ ಅಸೊ್ತಸಹಾಯಕ‌ರು,ಅಂಗರಕ್ಷಕ,ಚಾಲಕ ಗಾಯಗೊಂಡಿದ್ದರು.


ಕಾರು ಅಪಘಾತದ ದೃಶ್ಯವನ್ನು ಸಾಮಾಜಿಕ ಜಾಲತಾಣವಾದ ಪೇಸ್ ಬುಕ್ ನಲ್ಲಿ ಯಾರೋ ಪೋಸ್ಟ್ ಮುಖಾಂತರ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಆರೋಪಿ ಪ್ರಭಾಕರ ಹೆಗ್ಡೆ ಎಂಬಾತ ಸಾಮಾಜಿಕ ಜಾಲಾತಾಣವಾದ ಫೇಸ್‌ ಬುಕ್‌ ನಲ್ಲಿ  ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿ ವಿಕೃತಿ ಮೆರೆದಿದ್ದ ಈತನ ವಿರುದ್ಧ ಕಾನುಇನು ಕ್ರಮ ಕೈಗಿಳ್ಲಕುವಂತೆ ಒತ್ತಾಯಿಸಿ ಬೇಬಿಕುಂದರ್ ನೇತೃತ್ವದ ನಿಯೋಗ ಮಂಗಳವಾರ ಬಂಟ್ವಾಳ ಉಪವಿಭಾಗದ ಎಎಸ್ಪಿಯವರಿಗೆ ದೂರು ಸಲ್ಲಿಸಿತ್ತು.


ನಿಯೋಗದಲ್ಲಿ ಪಕ್ಷದ ಮುಖಂಡರಾದ ಚಂದ್ರಪ್ರಕಾಶ್ ಶೆಟ್ಟಿ,ಬಾಲಕೃಷ್ಣ ಅಂಚನ್, ಅಬ್ಬಾಸ್ ಆಲಿ, ಸಂಪತ್ ಕುಮಾರ್ ಶೆಟ್ಟಿ,ಸುದೀಪ್ ಕುಮಾರ್ ರೈ ಮಾಣಿ,ನಾರಾಯಣ ನಾಯ್ಕ್ ಮೊದಲಾದವರಿದ್ದರು.
ಈ ಬಗ್ಗೆ ಬುಧವಾರ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಪ್ರಭಾಕರ ಹೆಗ್ಡೆ ವಿರುದ್ದ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.

 

By Suddi9

Leave a Reply

Your email address will not be published. Required fields are marked *