ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು ರಿ. ಇದರ ನೇತೃತ್ವದಲ್ಲಿ ಬಂಟರ ಸಂಘ ಬಂಟವಾಳ ತಾಲುಕು(ರಿ) ಮಹಿಳಾ ವಿಭಾಗದ ವತಿಯಿಂದ, ಬಂಟರ ಸಂಘ ಬಂಟವಾಳ ತಾಲೂಕು(ರಿ) ಯುವ ವಿಭಾಗ ಇದರ ಸಹಕಾರದೊಂದಿಗೆ ಶ್ರೀ ಮಹಾ ಗಣಪತಿ ಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಬ್ರಹ್ಮರಕೊಟ್ಲುವಿನ ಬಂಟವಾಳ ಬಂಟರ ಭವನದಲ್ಲಿ ನಡೆಯಿತು,

ಈ ಸಂದರ್ಭ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ.ಬಳಿಕ ತಾಲೂಕು ಬಂಟರ ಸಂಘದ ಅಧ್ಯಕ್ಷ
ಜಗನ್ನಾಥ ಚೌಟ ಬದಿಗುಡ್ಡೆ ಅವರ ಅಧ್ಯಕ್ಷತೆಯಲ್ಲಿ, ಧಾರ್ಮಿಕ ಸಭಾಕಾರ್ಯಕ್ರಮವು ನಡೆಯಿತು.
ಬೆಂಗಳೂರು ಎಂ.ಡಿ.ಎನ್.ಎಸ್.ಆರ್. ಕಾಪರ್ ನ ಪ್ರಮೋದ ನಿತ್ಯಾನಂದ ಶೆಟ್ಟಿ, ರೈ ಎಸ್ಟೇಟ್ ಮತ್ರು ಬಿಲ್ರ‍್ಸ್ ಪ್ರೆ.ಲಿ.ನ ಡೈರೆಕ್ಟರ್ಸುಮಾ ಅಶೋಕ್ ರೈ, ಮೂಡಬಿದ್ರೆ ಆಳ್ವಾ ಸ್ ಫಾರ್ಮಸಿ ಎಜುಕೇಷನ್ ಫೌಂಡೇಷನ್ ವೈಧ್ಯಕೀಯ ನಿರ್ವಾಹಕರಾದಡಾ| ಗ್ರೀಷ್ಮಾ ವಿವೇಕ್ ಆಳ್ವ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆಸುಜಾತ ಪಿ. ರೈ ಕಲ್ಲಡ್ಕ ಅವರು ಪ್ರಸ್ತಾವಿಸಿ, ಸ್ವಾಗತಿಸಿದರು.
ಆರ್ಥಿಕವಾಗ ಹಿಂದುಳಿದ ವಿದ್ಯಾರ್ಥಿನಿಗೆ ಸಹಾಯಯಧನ ವಿತರಿಸಲಾಯಿತು. ಬಂಟರ ಸಂಘದ ಕಾರ್ಯದರ್ಶಿ ಸದಾನಂದ ಆಳ್ವ ಕಂಪ, ಯುವ ವಿಭಾಗದ ಅಧ್ಯಕ್ಷರಾದ ಗೋಕುಲ್ ಭಂಡಾರಿ, ಮಹಿಳಾ ವಿಭಾಗದ ಉಪಾಧ್ಯಕ್ಷೆ
ಜ್ಯೋತಿ ಎನ್. ಹೆಗ್ಡೆ, ಕೋಶಾಧಿಕಾರಿ ರೂಪಾ ಎಲ್. ಶೆಟ್ಟಿ, ಜತೆ ಕಾರ್ಯದರ್ಶಿಸುಜಾತ ಆರ್. ಭಂಡಾರಿ, ಧಾರ್ಮಿಕ ಸಮಿತಿ ಸಂಚಾಲಕದಯಾನಂದ ಶೆಟ್ಟಿ ಅಮೈ ಉಪಸ್ಥಿತರಿದ್ದರು.ಮಹಿಳಾ ವಿಭಾಗದ ಕಾರ್ಯದರ್ಶಿ ಮಂದಾರತಿ ಎಸ್. ಶೆಟ್ಟಿ ವಂದಿಸಿದರು.ಆಶಾಲತಾ ಡಿ. ಶೆಟ್ಟಿ ಅಮೈ ಇವರು ಕಾರ್ಯಕ್ರಮ ನಿರೂಪಿಸಿದರು,
