module: a; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 35.0; hist255: 0.0; hist252~255: 0.0; hist0~25: 0.0;

ಬಂಟ್ವಾಳ: ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ.)ಮಂಗಳ ಕಿಸಾನ್ ಸಮೃದ್ಧಿ ವಿಭಾಗದ‌ 2026ನೇ ಸಾಲಿನ ದ.ಕ,,ಉಡುಪಿ, ಕಾಸರಗೋಡು ಒಳಗೊಂಡ ಮಂಗಳೂರು ವಿಭಾಗದ150 ಕೃಷಿಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೋಮವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ‌ ನಡೆಯಿತು.

ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಕೃಷಿ ಪ್ರಶಸ್ತಿಯನ್ನು ಪ್ರದಾನಗೈದು ಆಶೀರ್ವಚನವಿತ್ತು

,ಕೃಷಿಕರನ್ನು ಗೌರವಿಸುವುದು ಬಲುದೊಡ್ಡ ಕಾರ್ಯವಾಗಿದ್ದು,ಸಾವಯವ ಗೊಬ್ಬರದ ಮೂಲಕ  ಮಣ್ಣಿನ ಫಲವತ್ತತೆ ಮತ್ತು ಆರೋಗ್ಯವನ್ನು ರಕ್ಷಿಸಲು ಸಾಧ್ಯ,ಪ್ರ್ತುತ ದಿನಗಳಲ್ಲಿ ಸಾವಯವ ಕೃಷಿ ಪದ್ದತಿ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ ಎಂದರು.
ಕರ್ನಾಟಕ ಸಾವಯವ ಕೃಷಿ ಯೋಜನೆಯ ಆಡಳಿತ ನಿದೇರ್ಶಕರಾದ ಮೋಹನ್ ಗೌಡ ಕಲ್ಮಂಜ
ಅಧ್ಯಕ್ಷತೆ ವಹಿಸಿದ್ದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಕಸ್ತೂರಿರಂಗನ್ ಹೋರಾಟ ಸಮಿತಿ ಸಂಚಾಲಕ ಕಿಶೋರ್ ಗೌಡ, ಶಿರಾಡಿ,  ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬೆಳ್ತಂಗಡಿ,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಪಂಜಿಕಲ್ಲು, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿಕುಂದರ್,
2025 ಸಾಲಿನ ಕೃಷಿ ಪ್ರಶಸ್ತಿ ಸನ್ಮಾನಿತರಾದ
ಅಮ್ಮಣ್ಣ ರೈ, ಪುತ್ತೂರು,  ಮಾಳ ವಿನೀತ್ ಹೆಗ್ಡೆ, ಕಜಕಳಬೆಟ್ಟು,  ರಾಮ ಮೂರ್ತಿ ಕಲ್ಕೂರ್ , ಲ್ಯಾನ್ಸಿ ಪಿರೇರಾ, ಪೊನ್ನಂಗಿಲ ಬಂಟ್ವಾಳ,ಅರಿಯಡ್ಕ, ಪುತ್ತೂರು, ಹಿರಿಯ ಮುಖ್ಯಾಧಿಕಾರಿ ಭಾರತಿ ರೈ, ಕಾರ್ಕಳ ಹಿರಿಯ ಮುಖ್ಯಾಧಿಕಾರಿ ಶಾರದಾ ಶೆಟ್ಟಿ, ಕಾಸರಗೋಡು ಜಿಲ್ಲಾ ಹಿರಿಯ ಅಧಿಕಾರಿಗಳು
ಪೂರ್ಣಿಮಾ ಅಡೂರ್, ಯೋಜನೆಯ ಸಹ ಆಡಳಿತ ನಿರ್ದೇಶಕರಾದ ಅಶ್ವಿನಿ ಮೋಹನ್ ಕುಮಾರ್‌ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *