ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ಪಾಣೆಮಂಗಳೂರು ವಲಯದ ಸಜೀಪ ಮುನ್ನೂರು, ಸಜಪ ಮೂಡ, ಸಜೀಪ ನಡು ಒಕ್ಕೂಟಗಳ ಪದಗ್ರಹಣ ಸಮಾರಂಭ ಕಂದೂರಿನ ಶ್ರೀ  ಮಾಚಿದೇವ ಸಭಾಭವನದಲ್ಲಿ ನಢಯಿತು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಸ್ಥಾಪಕಾಧ್ಯಕ್ಷರಾದ ಎ.ಸಿ.ಭಂಡಾರಿ ವಹಿಸಿದ್ದರು.
  ವೀರಕಂಭ ಮಜಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ  ಲಕ್ಷ್ಮಿ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಡೆಸುತ್ತಿರುವ ಕಾರ್ಯಕ್ರಮಗಳು ಸ್ವಸ್ಥ ಸಮಾಜವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತಿದ್ದು, ಗ್ರಾಮೀಣ ಭಾಗದ ಜನತೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.


ಕೇಂದ್ರ ಕಚೇರಿ ಧರ್ಮಸ್ಥಳ ಜ್ಞಾನವಿಕಾಸ ವಿಭಾಗದ  ನಿರ್ದೇಶಕ ದಿನೇಶ್ ಒಕ್ಕೂಟದ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾoತರಿಸಿದರು ಭಾರತೀಯ ಜೀವ ವಿಮಾ ವಿಭಾಗ ಉಡುಪಿಯ ಮ್ಯಾನೇಜರ್   ಸೋಮ ಸುಂದರ್ ಯೋಜನೆಯ ಮುಖಾಂತರ ಮಾಡುವ ವಿಮಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ  ಎಸಿ ಭಂಡಾರಿ ಅವರನ್ನು ಹಾಗೂ ಒಕ್ಕೂಟಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಪದಾಧಿಕಾರಿಗಳನ್ನು ಗೌರವಿಸಲಾಯಿತಲ್ಲದೆ ಆಯ್ಕೆಯಾದ ಸಂಘದ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಆದೇಶ ಪತ್ರ ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ಮೊದಲು ಸಜೀಪ ಮಾಗಣೆ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ಪೌರೋಹಿತ್ವದಲ್ಲಿ
ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.


ಉದ್ಯಮಿ ಶ್ರೀಕಾಂತ್ ಶೆಟ್ಟಿ ಸಂಕೇಶ, ನಂದಾವರ ಶ್ರೀ ವಿನಾಯಕ ಶಂಕರ್ ನಾರಾಯಣ ದುರ್ಗಾಂಬ ಕ್ಷೇತ್ರದ ಅಧ್ಯಕ್ಷ
ಪ್ರಭಾಕರ ಶೆಟ್ಟಿ ಕಾಂತಾಡಿ ಗುತ್ತು,ಅನ್ನಪ್ಪಾಡಿ  ಬಾಲ ಗಣಪತಿ ದೇವಸ್ಥಾನದ ಅಧ್ಯಕ್ಷ ಯಶವಂತ ದೇವರಾಜೆಗುತ್ತು,
ಸಜೀಪ ಮೂಢ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ತಾಲೂಕು ಯೋಜನಾಧಿಕಾರಿ ಜಯಾನಂದ ಪಿ , ಶಿವ ಖಂಡಿಗ, ಗಂಗಾಧರ ಭಂಡಾರಿ, ಹರಿಣಾಕ್ಷಿ,  ಹೇಮಾವತಿ, ನೂತನ ಒಕ್ಕೂಟದ ಅಧ್ಯಕ್ಷರುಗಳಾದ ಪುರಂದರ, ಮುರಳಿದರ ಬಟ್, ನಾಗೇಶ್,  ಶಶಿಕಲಾ ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿಗಳಾದ ಬಬಿತ ಒಕ್ಕೂಟ ಸಾಧನ ವರದಿ  ವಾಚಿಸಿದರು.  ಬೇಬಿ ಸ್ವಾಗತಿಸಿದರು, ನಿರ್ಮಲ ಸನ್ಮಾನ ಪತ್ರ ವಾಚಿಸಿದರು.  ವಲಯ ಮೇಲ್ವಿಚಾರಕಿ  ಶಿವಲಕ್ಷ್ಮಿ ವಂದಿಸಿದರು.ಸುಬ್ರಾಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *