ಬಂಟ್ವಾಳ: ಕಡುಬಡತನದಲ್ಲಿ ಬೆಳೆದುಬಂದ ನನಗೆ ಬದುಕು ಅನೇಕ ಜೀವನಪಾಠಗಳನ್ನು ಕಲಿಸಿಕೊಟ್ಟಿದೆ. ಹೀಗಾಗಿ ಬಡತನದ ನೋವು ಏನೆಂದು ಬಹಳ ಹತ್ತಿರದಿಂದ ಕಂಡುಕೊಂಡಿದ್ದೇನೆ. ಈ ನೋವು ನನಗೆ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಿದೆ ಎಂದು ಶ್ರೀನಿವಾಸ ಫೌಂಡೇಶನ್(ರಿ.) ಮುಂಬೈ ಸಂಸ್ಥಾಪಕ ಶ್ರೀನಿವಾಸ ಪಿ. ಸಪಲ್ಯ ಅವರು ಹೇಳಿದ್ದಾರೆ.

ತೊಕ್ಕೊಟ್ಟು ಗಾಣಿಗ ಭವನದಲ್ಲಿ ವಿಶ್ವ ಗಾಣಿಗರ ಚಾವಡಿ(ರಿ.) ಮತ್ತು ಶ್ರೀನಿವಾಸ ಫೌಂಡೇಶನ್(ರಿ.) ಮುಂಬೈ ಜಂಟಿಆಶ್ರಯದಲ್ಲಿ ನೆರವೇರಿದ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ಸುಮಾರು ೬೩ ವಿದ್ಯಾರ್ಥಿಗಳಿಗೆ ಒಟ್ಟು ೧೧ ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತಲ್ಲದೆ ಆರೋಗ್ಯ ಸಂಜೀವಿನಿ ಯೋಜನೆಯಡಿ ಮೂವರು ಫಲಾನುಭವಿಗಳಿಗೆ ಚೆಕ್ ಹಸ್ತಾಂತರಿಸಲಾಯಿತು.ಮುಂದಿನ ವರ್ಷ ಅರ್ಹ ೧೦ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡುಗೆಯಾಗಿ ನೀಡುವುದಾಗಿಯು ಶ್ರೀನಿವಾಸ ಪಿ. ಸಪಲ್ಯ ಅವರು ಪ್ರಕಟಿಸಿದರು.
ಶ್ರೀನಿವಾಸ ಫೌಂಡೇಶನ್(ರಿ.) ಮುಂಬೈ ಪದಾಧಿಕಾರಿಯಾದ ರತಿಕಾ ಶ್ರೀನಿವಾಸ ಪಿ. ಸಪಲ್ಯ ಮುಂಬೈ, ಸಾಪಲ್ಯ ಸೇವಾ ಸಂಘ(ರಿ.) ಮುಂಬೈ ಉಪಾಧ್ಯಕ್ಷರಾದ ಕೃಷ್ಣಕುಮಾರ್ ಬಂಗೇರ, ಅನಿತಾ ಕೃಷ್ಣಕುಮಾರ್ ಮುಂಬೈ, ಜೊತೆಕಾರ್ಯದರ್ಶಿ ಕಿರಣ್‌ಕುಮಾರ್ ಮುಂಬೈ, ದ.ಕ. ಜಿಲ್ಲಾ ಗಾಣಿಗರ ಯಾನೆ ಸಪಲಿಗರ ಸಂಘ ಮಾಜಿ ಅಧ್ಯಕ್ಷ ವಿಶ್ವಾಸ್‌ಕುಮಾರ್ ದಾಸ್, ದ.ಕ. ಜಿಲ್ಲಾ ಗಾಣಿಗರ ಮಹಿಳಾ ಸಂಘ ಮಾಜಿ ಅಧ್ಯಕ್ಷೆ ಶಾಲಿನಿ ಅತ್ತಾವರ, ಅತ್ತಾವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ಮಳಲಿ, ಸುನೀಲ್ ಅತ್ತಾವರ, ಕರಾವಳಿ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿ(ರಿ.) ಅತ್ತಾವರ ಮಾಜಿ ಅಧ್ಯಕ್ಷ ಎ.ಎಸ್. ವೆಂಕಟೇಶ್, ನಿರ್ದೇಶಕರಾದ ರಮೇಶ್ ಮೆಂಡನ್, ಪದ್ಮನಾಭ ಸಪಲ್ಯ, ಪ್ರಮುಖರಾದ ಸಂಜೀವ ಪಡುಮನೆ ಉಳಿಯ, ರಾಘವ ಪಡೀಲ್, ಕೃಷ್ಣಪ್ಪ ಗಾಣಿಗ ಮಾಣಿಮಜಲು, ಲಕ್ಷಿö್ಮÃ ಪ್ರಸಾದ್ ಬೆಟ್ಟ, ದಯಾನಂದ ಬಂಗೇರ ಮಂಜೇಶ್ವರ, ಭುವನೇಶ್ ರಘು ಸಪಲ್ಯ, ಹರಿರಾಮಚಂದ್ರ ಉಪ್ಪಿನಂಗಡಿ, ಪ್ರಕಾಶ್ ಕೊಲ್ಯ, ಭಾಸ್ಕರ ಎಡಪದವು, ರಾಮ್‌ದಾಸ್ ಸೋಮೇಶ್ವರ, ಕಾಂತಪ್ಪ ಸಪಲಿಗ ಮಳಲಿ, ಬಾಲಕೃಷ್ಣ ಸೆರ್ಕಳ, ನಾರಾಯಣ ಸಪಲ್ಯ ಕಣ್ಣೂರು, ಸುನೀಲ್‌ಕುಮಾರ್ ತೊಕ್ಕೊಟ್ಟು, ಭರತ್ ತೊಕ್ಕೊಟ್ಟು, ಮೋಹನ್ ಉಳ್ಳಾಲ, ಸುಂದರ ಉಳ್ಳಾಲ, ಮೋಹನ್ ಶ್ರೀಯಾನ್, ಅನಂತವಿಜಯ್ ತುಂಬೆ, ಗಾಯತ್ರಿ ಬಂಗೇರ, ಜ್ಯೋತಿಪ್ರವೀಣ್ ತಲಪಾಡಿ, ಪ್ರಸಾದ್ ಕಣ್ಣೂರು, ಸಂದೀಪ್ ಮೆಂಡನ್ ಎಡಪದವು, ಶ್ರೀಕಾಂತ್ ನರಿಕೊಂಬು, ಯುವರಾಜ್ ಬೋಳಂಗಡಿ, ರಕ್ಷಿತ್ ಉಳ್ಳಾಲ, ಸುಶ್ಮಿತಾ ಸುನಿಲ್ ಉಪ್ಪಿನಂಗಡಿ, ಶೃತಿ ವಿಕಾಸ್ ತಲಪಾಡಿ, ರಕ್ಷಾ ಬೋಳಾರ್, ಅನನ್ಯ ಜಿ. ಶಂಭೂರು, ದೇವರಾಜ್ ಎಡಪದವು, ಅಭಿಷೇಕ್ ಧರ್ಮಸ್ಥಳ, ಚಿತ್ರಾಕ್ಷಿ ಅಭಿಷೇಕ್ ಧರ್ಮಸ್ಥಳ, ಸುಶಾನ್ ಪಾಣೇರ್, ಶಶಿಕಾಂತ್ ಮುಂಡ್ಕೂರು, ಮತ್ತಿತರರು ಉಪಸ್ಥಿತರಿದ್ದರು.
ಅತಿಥಿಗಳಿಗೆ ಗಿಡಗಳನ್ನು ಸ್ಮರಣಿಕೆಯಾಗಿ ನೀಡಿ ವಿ.ಜಿ.ಸಿ.(ರಿ.) ಟ್ರಸ್ಟ್ ಸದಸ್ಯರು ಪರಿಸರಪ್ರೇಮ ಮೆರೆದರು. ಕಳೆದ ಬಾರಿ ವಿದ್ಯಾರ್ಥಿವೇತನ ಪಡೆದು ಉನ್ನತ ವ್ಯಾಸಂಗವನ್ನು ಪೂರೈಸಿದ ಹಲವಾರು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪಂಚಮಿ ನಾಳ ತನಗೆ ವಿದ್ಯಾಭ್ಯಾಸಕ್ಕೆ ನೆರವಾದ ಶ್ರೀನಿವಾಸ ದಂಪತಿಗಳ ಚಿತ್ರಬರೆದು ಅವರಿಗೆ ಕೊಡುಗೆಯಾಗಿ ನೀಡಿದರು.
ಪಂಚಮಿ ನಾಳ ಮತ್ತು ಶಶಿಕಲಾ ನಾಳ ಕಾರ್ಯಕ್ರಮ ನಿರೂಪಿಸಿದರು. ಅದಿತಿ ಗಾಣಿಗ ಕದ್ರಿ ಪ್ರಾರ್ಥಿಸಿದರು. ವಿಜಿಸಿ(ರಿ.) ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ ಸ್ವಾಗತಿಸಿದರು. ದೇವಿಪ್ರಸಾದ್ ಎಂ. ದೇವಂದಬೆಟ್ಟು ಪ್ರಸ್ತಾವಿಸಿದರು. ಗಣೇಶ್ ಕೊಲ್ಲೂರು ವಂದಿಸಿದರು.
