ಹೊಸದಿಲ್ಲಿ: ಸದಾ ಒಂದಲ್ಲಾ ಒಂದು ರೀತಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಾ ಕಾಲಹಾರಣ ಮಾಡುತ್ತಿರುವ ತಮ್ಮದೇ ಪಕ್ಷದ ಮುಖಂಡರಿಂದ ರೋಸಿ ಹೋಗಿರುವ ಪ್ರಧಾನಿ ನರೇಂದ್ರ ಮೋದಿ ಆರ್ ಎಸ್ ಎಸ್ ಮುಂದೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದರು ಎಂದು `ಮಹಾರಾಷ್ಟ್ರ ಟೈಮ್ಸ್’ ವರದಿ ಮಾಡಿದೆ.

modi
ತಮ್ಮ ಸಂಪುಟ ದರ್ಜೆ ಮಂತ್ರಿಗಳಿಗೆ ವಿವಾದಾತ್ಮಕ ಹೇಳಿಕೆ ನೀಡಿ ಕಾಲಹರಣ ಮಾಡಬೇಡಿ ಎಂದು ಮೋದಿ ತಾಕೀತು ಮಾಡಿದ್ದರು. ಆದರೂ ಮೋದಿ ಮಾತನ್ನು ಕೇಳದ ಕೆಲವು ಮುಖಂಡರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದರು. ಇದರಿಂದ ರೋಸಿ ಹೋದ ನರೇಂದ್ರ ಮೋದಿ ಒಂದೊಮ್ಮೆ ಪಕ್ಷದ ಮುಖಂಡರನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದರೆ ಆರ್ ಎಸ್ ಎಸ್ ಮುಂದೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಮಹಾರಾಷ್ಟ್ರ ಟೈಮ್ಸ್ ವರದಿ ಮಾಡಿದೆ

By Suddi9

Leave a Reply

Your email address will not be published. Required fields are marked *