ಬಂಟ್ವಾಳ : ನರಿಕೊಂಬು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಹಬ್ಬ,ತೆನೆ ಹಬ್ಬ ಹಾಗೂ ಸಹಾಯಧನ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ನಿರ್ಣಯದಂತೆ, ಅನಾರೋಗ್ಯದಿಂದ ಬಳಲುತ್ತಿರುವ ಭಕ್ತಾದಿಗಳಿಗೆ ಸಹಾಯಧನವಾಗಿ ತಲಾ ಹತ್ತು ಸಾವಿರ ರೂ.ವನ್ನು ಫಲಾನುಭವಿಗಳಾದ ರಮೇಶ್ ಬಂಗಲಗುಡ್ಡೆ ಮತ್ತು ದೇವಪ್ಪ ಪೂಜಾರಿ ಅವರಿಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಘುನಾಥ ಸೋಮಾಯಾಜಿ ಹಸ್ತಾಂತರಿಸಿದರು. ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
