ಬಂಟ್ವಾಳ:ಸಮಾಜದ ಹಿಂದುಳಿದ ವರ್ಗಗಳ‌ ಹಾಗೂ ಕ್ಷೇತ್ರದ ಅಭಿವೃದ್ಧಿಗೂ ನಿರಂತರವಾಗಿ ಶ್ರಮಿಸಿರುವ ಮಾಜಿ ಸಚಿವ ರಮಾನಾಥ ರೈ ಓರ್ವ ಪ್ರಾಮಾಣಿಕ,ಸಜ್ಜನ ರಾಜಕಾರಣಿಯಾಗಿದ್ದಾರೆ ಎಂದು ಬಿ.ಸಿ.ರೋಡು ಸಂಚಯಗಿರಿಯ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಹೇಳಿದ್ದಾರೆ
 
ಭಾನುವಾರ ಸಂಜೆ ಬಿ.ಸಿ.ರೋಡಿನ ಅಂಬೇಡ್ಕರ್ ಭವನದಲ್ಲಿ ಹಿರಿಯ ರಾಜಕಾರಣಿ   ಮಾಜಿ‌ ಸಚಿವರಾದ ಬೆಳ್ಳಿಪ್ಪಾಡಿ ರಮಾನಾಥ ರೈಯವರಿಗೆ  ಹುಟ್ಟು ಹಬ್ಬದ ಸಮಿತಿಯ ವತಿಯಿಂದ ನಡೆದ ಹುಟ್ಟು ಹಬ್ಬದ ಸಂಭ್ರಮ ಕಾರ್ಯಕ್ರಮದ‌ಲ್ಲಿ ಅಭಿನಂದನಾ ಭಾಷಣಗೈದ ಅವರುರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರಕ್ಕೆ ರಮಾನಾಥ ರೈ ಅವರು ನೀಡಿದ ಸಹಕಾರವನ್ನು ಸ್ಮರಿಸಿದರು.
 
ವಿವಿಧ ನಿಗಮದ ಅಧ್ಯಕ್ಷರಾದ  ಮಮತಾ ಗಟ್ಟಿ, ಶಾಲೆಟ್ ಪಿಂಟೋ,ಲಾವಣ್ಯ ಬಲ್ಲಾಳ್,ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ,   ಮಾಜಿ ಜಿ.ಪಂ.ಸದಸ್ಯ  ಎಂ.ಎಸ್.ಮಹಮ್ಮದ್,ಕಾಂಗ್ರೆಸ್ ಮುಖಂಡ,ನ್ಯಾಯವಾದಿ ಅಶ್ವನಿ ಕುಮಾರ್ ರೈ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆಮಲ್ಲಿಕಾ ಪಕ್ಕಳ,ಸಮಿತಿ ಕಾರ್ಯದರ್ಶಿ ಪದ್ಮಶೇಖರ ಜೈನ್ , ಮುಸ್ತಾಪ ಸುಳ್ಯ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ,ಬಾಲಕೃಷ್ಣ ಅಂಚನ್, ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ಅಲಿ , ಬಂಟ್ವಾಳ ಭೂ ಬ್ಯಾಂಕ್  ಮಾಜಿ ಅಧ್ಯಕ್ಷ ಸುದರ್ಶನ್ ಜೈನ್ ಮೊದಲಾದವರಿದ್ದರು.,

ಸಮಿತಿ ಸಂಚಾಲಕ ಪಿಯೂಸ್ ಎಲ್.ರೋಡ್ರಿಗಸ್ ಸ್ವಾಗತಿಸಿದರು.ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ಪ್ರಸ್ತಾವನೆ ಗೈದು ಮುಂದಿನ ವರ್ಷ ಪೂರ್ತಿ ರೈಯವರ 75ನೇ ಹುಟ್ಟು ಹಬ್ಬದ ಆಚರಣೆ ಪ್ರಯುಕ್ತ ನಡೆಸಲಾಗುವ ವಿವಿಧ  ಯೋಜನೆಗಳ ಬಗ್ಗೆ ಪ್ರಕಟಿಸಿದರು.  

ಇದೇ ವೇಳೆ 75ರ ಸಂಭ್ರಮದ ಲಾಂಛನ ಬಿಡುಗಡೆ ಗೊಳಿಸಲಾಯಿತು.ರೈಯವರ ಅಭಿಮಾನಿಗಳು ಪುಷ್ಪ ಗುಚ್ಚ,ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸಮಿತಿ ಕಾರ್ಯದರ್ಶಿ ಬೇಬಿ ಕುಂದರ್ ವಂದಿಸಿದರು. ಬಾಲಕೃಷ್ಣ ‌ಆಳ್ವ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *