ಬಂಟ್ವಾಳ :ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಹಾಗೂ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ಸಹಯೋಗದಲ್ಲಿ ಸಹಕಾರಿ ಭೀಷ್ಮ ಶತಾಯುಷಿ ಬಿ ಶಂಕರ ನಾರಾಯಣ ಕುಲಾಲ್ ರವರಿಗೆ ಸಾರ್ವಜನಿಕ ನುಡಿನಮನ ಕಾರ್ಯಕ್ರಮ ಬಿ.ಸಿ ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.

ಮಾಜಿ ಸಚಿವ ಬಿ ರಮಾನಾಥ ರೈ ನುಡಿನಮನಗೈದು, ಹಿಂದುಳಿದ ಸಮಾಜದಲ್ಲಿ ಹುಟ್ಟಿ ಸಾಮಾಜಿಕ ಬದುಕಿಗೆ ಭದ್ರ ಬುನಾದಿ ಹಾಕಿ, ಸಣ್ಣ ಪ್ರಯತ್ನದಿಂದಲೇ ಸಮಾಜ ಸೇವೆಯ ಪಯಣ ಆರಂಭಿಸಿ, ಜೀವನದ ಕೊನೆಯವರೆಗೂ ಸಮುದಾಯ ಹಾಗೂ ಸಮಾಜದ ಸೇವೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡ ದಣಿವರಿಯದ ನಾಯಕ ಶತಾಯುಷಿ ಬಿ.ಎಸ್. ಕುಲಾಲ್ ನಡೆದ ಹಾದಿ ಸಮಾಜಕ್ಕೆ ಪ್ರೇರಣೆ ಎಂದರು.

ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ ಮಾತನಾಡಿ, ಸಮುದಾಯ ಹಾಗೂ ಸಮಾಜದಲ್ಲಿ ಎಲ್ಲರೂ ಸಹಬಾಳ್ವೆ, ಒಗ್ಗಟ್ಟು ಮತ್ತು ಪರಸ್ಪರ ಗೌರವದಿಂದ ಬದುಕಬೇಕೆಂಬ ಆಶಯದೊಂದಿಗೆ ನಿರಂತರವಾಗಿ ಪ್ರಯತ್ನಿಸಿದವರು ಎಂದರುಡಾ.ಅಣ್ಣಯ್ಯ ಕುಲಾಲ್ ಮಾತನಾಡಿ, ಸಮಾಜದ ಏಳಿಗೆಗೆ ಜೀವನವನ್ನು ಮುಡಿಪಾಗಿಟ್ಟು ನೂರು ವರುಷಗಳ ಕಾಲ ಸತ್ಯಕ್ಕೆ ನ್ಯಾಯ, ನಿಷ್ಠೆಗೆ ರಹದಾರಿಯಾಗಿ ಸ್ವತಂತ್ರ ಜೀವನ ನಡೆಸಿದರು ಎಂದರು.
ಪ್ರಮುಖರಾದ ಸುಭಾಶ್ಚಂದ್ರ ಜೈನ್, ಸೋಮಯ್ಯ ಹನೈನಡೆ,ಅಶೋಕ್ ಕುಲಾಲ್, ಲ.ಅನಿಲ್ ದಾಸ್, ಸದಾಶಿವ ಬಂಗೇರ , ಮಚ್ಚೇಂದ್ರ ಸಾಲ್ಯಾನ್ ನುಡಿ ನಮನ ಸಲ್ಲಿಸಿದರು. ಶ್ರೀ ರಕ್ತೇಶ್ವರೀ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಬಿ ಮೋಹನ್,ವೇದಿಕೆ ವಿಭಾಗಧ್ಯಕ್ಷರಾದ ಸುಕುಮಾರ್ ಬಂಟ್ವಾಳ್,ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ ಭಾರತಿ ಶೇಷಪ್ಪ , ಹಿರಿಯ ನಾಗರೀಕ ಸಂಘದ ಶೇಷಪ್ಪ ಮಾಸ್ಟರ್,ಪದ್ಮನಾಭ ಎಂ. ವಿಶ್ವನಾಥ್ ಸೋರ್ನಾಡು, ರತ್ನಾವತಿ ಎಂ.,ಸಹಿತ ಬಿ. ಎಸ್ ಕುಲಾಲ್ ರವರ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಹಾಜರಿದ್ದು ಶ್ರದ್ಧಾಂಜಲಿ ಸಲ್ಲಿಸಿದರು.ಕಲಾವಿದ ಹೆಚ್ ಕೆ ನೈನಾಡ್ ಕಾರ್ಯಕ್ರಮ ನಿರೂಪಿಸಿದರು.
