ಬಂಟ್ವಾಳ: ಜೀವನದಲ್ಲಿ ಸನ್ಮಾರ್ಗವನ್ನು ತೋರಿಸುವವನೇ ನಿಜವಾದ ಗುರು. ವಿದ್ಯಾರ್ಥಿಗಳ ಜೀವನಕ್ಕೆ ಮಾರ್ಗದರ್ಶಕರ ಸೇವೆ ಹಾಗೂ ತ್ಯಾಗಗಳನ್ನು ಎಂದಿಗೂ ಮರೆಯಬಾರದು. ಎಸ್.ರಾಧಾಕೃಷ್ಣನ್ರವರು ಎಲ್ಲಾ ಕಾಲಕ್ಕೂ ಆದರ್ಶಪ್ರಾಯವಾದವರು ಎಂದು ಬಂಟ್ವಾಳ ಶ್ರೀ ವೆಂಕಟರಮಣಸ್ವಾಮೀ ಪದವಿ ಕಾಲೇಜಿನ ಪ್ರಾಂಶುಪಾಲರಾದ ಎಂ.ಡಿ.ಮಂಚಿ ಹೇಳಿದರು.

ಬಂಟ್ವಾಳ ಶ್ರೀ ವೆಂಕಟರಮಣಸ್ವಾಮೀ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಗುರುಗಳು ತೋರಿದ ಮಾರ್ಗದಲ್ಲಿ ನಡೆದದ್ದೇ ಆದಲ್ಲಿ ವಿದ್ಯಾರ್ಥಿಯ ಭವಿಷ್ಯವು ಉಜ್ವಲವಾಗುವುದು ಎಂದು ಎಸ್.ವಿ.ಎಸ್.ಪಿ.ಯು ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ. ಹೇಳಿದರು.
ವೇದಿಕೆಯಲ್ಲಿ ಉಪನ್ಯಾಸಕರಾದ ಅಖಿಲಾ ಪೈ, ಶಶಿಧರ್, ಡಾ.ಕಾಶೀನಾಥ ಶಾಸ್ತ್ರೀ ಹೆಚ್.ವಿ. ಇದ್ದರು. ಕು. ತೃಪ್ತಿ ಸ್ವಾಗತಿಸಿ, ಕು.ಚರಣ್ಯ ತಂಡದವರು ಪ್ರಾರ್ಥಿಸಿದರು. ಸ್ಫೂರ್ತಿ ಎಂ. ನಿರೂಪಿಸಿ, ಪನ್ನಗ ಶ್ರೀ ವಂದಿಸಿದರು.
ಬಳಿಕ ಕು.ಪ್ರಾಜ್ಞವಿ ಹಾಗೂ ತಂಡದಿಂದ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ರು.
