ಬಂಟ್ವಾಳ:ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಿದ್ಯಾಭಾರತಿ ವತಿಯಿಂದ ನಡೆದ ಪ್ರಾಂತೀಯ ಕ್ರೀಡಾಕೂಟ 2026-27ರ ಬಾಲಕಿಯರ 17ವಯೋಮಿತಿಯ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಟೂರ್ನಮೆಂಟ್‌ನಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಕು. ಇಶ ಅನ್ವಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಅವರು ಬಂಟ್ವಾಳ ತಾಲೂಕಿನ ಕಳ್ಳಿಗೆ ನಿವಾಸಿ ಶುಭಾ ಬಂಜನ್ ಮತ್ತು ಆನಂದ್ ಬಂಜನ್ ಅವರ ಪುತ್ರಿಯಾಗಿದ್ದಾರೆ.2023-24ನೇ ಸಾಲಿನಲ್ಲೂ ನಡೆದ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಹಾಗೂ ಬೀದರ್ ನಲ್ಲಿ ನಡೆದ ರಾಜ್ಯ ಮಟ್ಟದ ಟಿ.ಟಿ ಟೂರ್ನಮೆಂಟ್ ನಲ್ಲಿ ಭಾಗವಹಿದ್ದರು.
ಇಶ ಅನ್ವಿ ಅವರ ಈ ಸಾಧನೆಗೆ ಶಾಲಾ ಶಿಕ್ಷಕರು,ಶಿಕ್ಷಕೇತರರು ಅಭಿನಂದನೆ ಸಲ್ಲಿಸಿದ್ದಾರೆ.
