ಬಂಟ್ವಾಳ: ಶ್ರೀಕೃಷ್ಣ ಮಂದಿರ, ನವಜ್ಯೋತಿ ಮಿತ್ರ ಮಂಡಳಿ ಮತ್ತು ಜ್ಯೋತಿ ಮಹಿಳಾ ಮಂಡಲ ಅಮ್ಟೂರು ಇದರ ಸಂಯಕ್ತಾಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ೪೦ನೇ ವರ್ಷದ ಮೊಸರುಕುಡಿಕೆ ಉತ್ಸವವನ್ನು ಆಚರಿಸಲಾಯಿತು.

ಬೆಳಿಗ್ಗೆ ನಡೆದ ಆಟೋಟ ಸ್ಪರ್ಧೆಯನ್ನು ಮಂದಿರದ ಅರ್ಚಕರಾದ ಮೋಹನ ಆಚಾರ‍್ಯ ಉದ್ಘಾಟಿಸಿದರು. ಮಧ್ಯಾಹ್ನದ ಬಳಿಕ ಅಮ್ಟೂರು ಪೊಯ್ಯಕಂಡ ರಸ್ತೆಗಳಲ್ಲಿ ಶೋಭಾಯಾತ್ರೆ ನಡೆಯಿತು. ಚೆಂಡೆ, ಕುಣಿತ ಭಜನೆಗಳು ಮತ್ತು ಪುಟಾಣಿ ಕೃಷ್ಣ-ರಾಧೆಯರ ವೇಷ ಗಮನಸೆಳೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯತೀನ್ ಕುಮಾರ್ ಏಳ್ತಿಮಾರ್ ಪಂಚವಟಿ ಕಲ್ಲಡ್ಕ ಅವರು ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಬೌದ್ಧಿಕ್ ಪ್ರಮುಖ್ ಹರೀಶ್ ಎ ವಿಟ್ಲ ಧಾರ್ಮಿಕ ಉಪನ್ಯಾಸಗೈದರು.
ವೇದಿಕೆಯಲ್ಲಿ ಮಂದಿರದ ಅಧ್ಯಕ್ಷರಾದ ಭಾಸ್ಕರ ಅಮ್ಟೂರು, ಜ್ಯೋತಿ ಮಹಿಳಾ ಮಂಡಲದ ಕಾರ್ಯದರ್ಶಿ ಸುಜಾತ ಕೊಟ್ಟಾರಿ ಉಪಸ್ಥಿತರಿದ್ದರು.
ಶ್ರೀದೇವರ ಶೋಭಾಯಾತ್ರೆಗೆ ದೇವರ ಮಂಟಪವನ್ನು ತಯಾರಿಸಿ ಮಂದಿರಕ್ಕೆ ಸಮರ್ಪಿಸಿದ ವೇಣುಗೋಪಾಲ ಅವರನ್ನು ಸನ್ಮಾನಿಸಲಾಯಿತು. ಮಂದಿರದ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು ಸ್ವಾಗತಿಸಿದರು, ಜಿತೇಶ್ ಶೆಟ್ಟಿ ಬಾಳಿಕೆ ವಂದಿಸಿದರು.ವಸಂತ ಭಟ್ಟಹಿತ್ತಲು ನಿರೂಪಿಸಿದರು,
