ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುವ ಹಲವು ಕಾರ್ಯಕ್ರಮಗಳಿಂದಾಗಿ ಯೋಜನೆಯ ಸದಸ್ಯರು ಸ್ವಾವಲಂಬಿಗಳಾಗಿ  ಬದುಕುವಂತಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್ (ರಿ.)ಬಂಟ್ವಾಳ ಇದರ ಪ್ರಗತಿ ಬಂದು ಸ್ವಸಹಾಯ ಸಂಘಗಳ  ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಸದಾನಂದ ಗೌಡ ನಾವುರ ಹೇಳಿದರು.                      

 
ಭಾನುವಾರ ಬಂಟ್ವಾಳ ತಾ.ನ ಅಮ್ಟೂರು ಶ್ರೀ  ಕೃಷ್ಣ ಭಜನಾ ಮಂದಿರದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ ಟ್ರಸ್ಟ್ (ರಿ )ಬಂಟ್ವಾಳ ತಾಲೂಕು ಪ್ರಗತಿ ಬಂದು ಸ್ವ -ಸಹಾಯ ಸಂಘಗಳ ಒಕ್ಕೂಟ ಪಾಣೆಮಂಗಳೂರು ವಲಯದ  ಅಮ್ಟಾರು, ಕರಿಂಗಾಣ ಒಕ್ಕೂಟದ ವತಿಯಿಂದ ನಡೆದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟ ಪದಗ್ರಹಣ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.      
 
ಸಮಾರಂಭದ ಅಧ್ಯಕ್ಷತೆಯನ್ನು  ಪ್ರಗತಿ ಬಂದು ಸ್ವಸಹಾಯ  ಸಂಘಗಳ  ಅಮ್ಟಾರು, ಕರಿಂಗಾಣ ಒಕ್ಕೂಟ ಅಧ್ಯಕ್ಷ ವಿಶ್ವನಾಥ ಮೂಲ್ಯ ವಹಿಸಿದ್ದರು.       
  
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ  ಜಯಾನಂದ ಪಿ.,ಒಕ್ಕೂಟದ ಪದಾಧಿಕಾರಿಗಳ ದಾಖಲಾತಿ ಜವಾಬ್ದಾರಿಯ ಹಸ್ತಾಂತರಿಸಿ ಮಾತನಾಡಿ,ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯೋಜನೆಯು ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು.
ಒಕ್ಕೂಟದ ನೂತನ ಅಧ್ಯಕ್ಷ ಶುಭ, ಉಪಾಧ್ಯಕ್ಷ ಮನೋಹರ ಆಚಾರ್ಯ, ಕಾರ್ಯದರ್ಶಿ ಸುಜಾತ, ಜೊತೆ ಕಾರ್ಯದರ್ಶಿ ಭಾರತಿ, ಕೋಶಾಧಿಕಾರಿ ಬಾಲಕೃಷ್ಣ ದೇವಾಡಿಗ ರವರಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಯೋಜನೆಯ ಹಿರಿಯ ಸದಸ್ಯರುಗಳನ್ನು,ಹಾಗೂ ನಿವೃತ್ತ ಯೋಧ ಭಾಸ್ಕರ್ ಪೊಯ್ಯೆಕಂಡರವರನ್ನುಸನ್ಮಾನಿಸಲಾಯಿತು.   
 
 ಗೊಳ್ತಮಜಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಸುನಿಲ್ ಕುಮಾರ್,  ಉದ್ಯಮಿ ಜಗದೀಶ್ ಬಜ್ಜರ್ ವೇದಿಕೆಯಲ್ಲಿದ್ದರು.  ಮೇಘಶ್ರೀ, ದೀವಿತ  ಪ್ರಾರ್ಥಿಸಿ , ಪಾಣೆಮಂಗಳೂರು ವಲಯ ಮೇಲ್ವಿಚಾರಕಿ ಶಿವಾಲಕ್ಷ್ಮಿ ಸ್ವಾಗತಿಸಿದರು,ಸೇವಾಪ್ರತಿನಿಧಿ ವನಿತಾ  ಒಕ್ಕೂಟದ ಸಾಧನಾ ವರದಿ ವಾಚಿಸಿದರು.  ಶಿಕ್ಷಕಿ ಸಂಪ್ರಿಯಾ ವಂದಿಸಿದರು.  ಆಂತರಿಕ ಲೆಕ್ಕಪರಿಶೋಧಕ  ಸುಬ್ರಾಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *