ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ  ವಿದ್ಯಾರ್ಥಿ ಪಾಲಕರಿಗೆ   “ಪಾಲಕ ಪ್ರಬೋಧನ್”  ಕಾರ್ಯಗಾರವನ್ನು ನಡೆಸಲಾಯಿತು.
 
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪುತ್ತೂರು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಶೋಭಿತಾ ಸತೀಶ್ ಅವರು ಮಾತಾನಾಡಿ,ಪ್ರೌಢಾವಸ್ಥೆಯಲ್ಲಿ ಮಕ್ಕಳನ್ನು  ನಿಭಾಯಿಸುವುದರ ಬಗ್ಗೆ  ಮತ್ತು ಪಾಲಕರ ಜವಾಬ್ದಾರಿಯ ಬಗ್ಗೆ ಮಾಹಿತಿಯನ್ನು ನೀಡಿದರು. 
 
ನಂತರ ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು.   ಶ್ರೀರಾಮ ವಿದ್ಯಾ ಕೇಂದ್ರದ ಕೋಶಾಧಿಕಾರಿಗಳಾದ ಸತೀಶ್ ಶಿವಗಿರಿ, ಆಡಳಿತ ಮಂಡಳಿಯ ಸದಸ್ಯ ರಾದ ನಾಗೇಶ್ ಕಲ್ಲಡ್ಕ , ಪ್ರಾಂಶುಪಾಲರಾದ  ವಸಂತ ಬಲ್ಲಾಳ್ , ವಿಜ್ಞಾನ  ವಿಭಾಗದ ಮುಖ್ಯಸ್ಥೆಯಾದ ಶೈಲಿನಿ ಉಪಸ್ಥಿತರಿದ್ದರು.  ಉಪನ್ಯಾಸಕಿ ರೇಷ್ಮಾ ಕಾರ್ಯಕ್ರಮ ನಿರ್ವಹಿಸಿದರು.
 

By Suddi9

Leave a Reply

Your email address will not be published. Required fields are marked *