ಬಂಟ್ವಾಳ: ಮಾಣಿ ಹಾಲು ಉತ್ಪಾದಕರ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 3,68,27,009.62 ರೂ. ವ್ಯವಹಾರ ನಡೆಸಿದ್ದು, 3,67,799.92 ಲಕ್ಷ ರೂ. ಲಾಭ ಗಳಿಸಿದೆ. ಸದಸ್ಯರಿಗೆ 10 ಶೇ. ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಎಚ್. ನಾರಾಯಣ ಭಟ್ ತಿಳಿಸಿದ್ದಾರೆ.

ಮಾಣಿ-ವಿದ್ಯಾನಗರ ಪೆರಾಜೆಪಾಳ್ಯದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಭಾಭವನದಲ್ಲಿ  ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.ಹಾಲು ಉತ್ಪಾದಕರು ಸ್ವಚ್ಛ ಹಾಲು ಪೂರೈಸುವ ಮೂಲಕ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಸಂಘದ ಪ್ರಗತಿಗೆ ಸದಸ್ಯರು ನಿರಂತರ ಸಹಕಾರ ನೀಡಬೇಕು ಎಂದು ಕೋರಿದರು.
ವಿಸ್ತರಣಾಧಿಕಾರಿ ನಾಗೇಶ್ ಅವರು ವಾರ್ಷಿಕ ವರದಿ ವಾಚಿಸಿದರು. ವಿಸ್ತರಣಾಧಿಕಾರಿ ಜಗದೀಶ್ ಅವರು ರಾಸುಗಳ ವಿಮೆ, ಹಸಿರು ಹುಲ್ಲಿನ ಮಹತ್ವ ಹಾಗೂ ಹೈನುಗಾರಿಕೆಗೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ನೀಡಿದರು.
ಸಭೆಯಲ್ಲಿ 45 ವರ್ಷಕ್ಕೂ ಅಧಿಕ ಕಾಲ ಸಂಘಕ್ಕೆ ಹಾಲು ಪೂರೈಸುತ್ತಿರುವ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತಲ್ಲದೆ 3,000 ಲೀಟರ್‌ಗಿಂತ ಅಧಿಕ ಹಾಲು ಪೂರೈಸಿದ ಸದಸ್ಯರನ್ನು  ಗೌರವಿಸಲಾಯಿತು.
ಉಪಾಧ್ಯಕ್ಷ ಸದಾನಂದ ರೈ, ನಿರ್ದೇಶಕರಾದ ನಾರಾಯಣ ಶೆಟ್ಟಿ, ಬಾಬು ಶೆಟ್ಟಿ, ಸಚ್ಚಿದಾನಂದ ರೈ, ಪ್ರಪುಲ್ಲಾ ರೈ,  ಶಿವರಾಮ ಗೌಡ, ಮಹೇಂದ್ರ ಡಿ., ಲಲಿತಾ ಎನ್. ನಾಯ್ಕ, ಸಂಘದ ಕಾರ್ಯನಿರ್ವಹಣಾಧಿಕಾರಿ ಎಂ. ನಾಗೇಶ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಜನಾರ್ದನ ಪೆರಾಜೆ ಸ್ವಾಗತಿಸಿದರು. ಬಾಲಕೃಷ್ಣ ಪೂಜಾರಿ ವಂದಿಸಿದರು. 

By Suddi9

Leave a Reply

Your email address will not be published. Required fields are marked *