ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಕೃತ ವಿಭಾಗದ ವತಿಯಿಂದ ಎಲ್ಲಾ ಸಂಸ್ಕೃತ ಅಧ್ಯಾಪಕವೃಂದ ಸೇರಿ “ಸಂಸ್ಕೃತ ಸಪ್ತಾಹ- 2026” ರ ಪ್ರಯುಕ್ತ ವಿದ್ಯಾಕೇಂದ್ರದ ಸಂಸ್ಕೃತ ವಿದ್ಯಾರ್ಥಿಗಳಿಗಾಗಿ “ಸಂಸ್ಕೃತ ಛಾತ್ರ ಸಮ್ಮೇಳನ”ವು ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು

ಪ್ರಗತಿಪರ ಕೃಷಿಕ, ಕಜೆ ವೃಕ್ಷಾಲಯದ ಸ್ಥಾಪಕರಾದ ವಸಂತ ಕಜೆ ಅವರು ದೀಪ ಬೆಳಗಿಸಿ ಸಮ್ಮೇಳನವನ್ನು ಉದ್ಘಾಟಿಸಿ ಶುಭಹಾರೈಸಿದರು

ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಶ್ರೀಮಾನ್ ಮಾತನಾಡಿ, ಸಂಸ್ಕೃತವು ಎಲ್ಲಾ ಭಾಷೆಗಳ ಜನನಿ, ಹಿಂದೆ ಸಂಸ್ಕೃತವು ಎಲ್ಲರ ಮಾತೃಭಾಷೆಯಾಗಿತ್ತು, ಸಂಸ್ಕೃತವು ಕೇವಲ ಭಾಷೆಯಲ್ಲ, ಸಂಸ್ಕೃತವನ್ನು ರಕ್ಷಿಸಿದರೆ ಅಪಾರ ಜ್ಞಾನ ಭಂಡಾರವನ್ನು ರಕ್ಷಿಸಿದಂತೆ ಎಂದರು.
ಪರ್ಯಾವರಣಗತಿವಿಧಿಯ ಪ್ರಾಂತ ಸಂಯೋಜಕ ವೆಂಕಟೇಶ್, ತ್ಯಾಜ್ಯ ನಿರ್ವಹಣಾ ವಿಭಾಗಪ್ರಮುಖ ಕೇಶವ ವೇದಿಕೆಯಲ್ಲಿದ್ದರು.

ಪ್ರೌಢಶಾಲೆಯ ಬಾಲಕಿಯರಾದ ಕು. ಭೂಮಿಕಾ ಸ್ವಾಗತಿಸಿ, ಕು. ರಾಜೇಶ್ವರಿ ವಂದಿಸಿದರು.
ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.
ಸಮ್ಮೇಳನದಲ್ಲಿ ವಿದ್ಯಾಕೇಂದ್ರದ ಎಲ್ಲಾ ವಿಭಾಗಗಳ ಸಂಸ್ಕೃತ ವಿದ್ಯಾರ್ಥಿಗಳು ಭಾಗವಹಿಸಿದ್ದು ರಸಪ್ರಶ್ನೆ, ಸರಳ ಸಂಸ್ಕೃತ ಸಂಭಾಷಣೆ, ಹಾಗೂ ವಿವಿಧ ಮನೋರಂಜನಾತ್ಮಕ ಕ್ರೀಡೆಗಳನ್ನು ಈ ಸಂದಬರ್ನ ಆಯೋಜಿಸಯಿತು.

ಶ್ರೀರಾಮ ಪದವಿ ವಿಭಾಗದ ಪ್ರಾಚಾರ್ಯ ಕೃಷ್ಣ ಪ್ರಸಾದ್ ಕಾಯರಕಟ್ಟೆ, ವಿದ್ಯಾಕೇಂದ್ರದ ಎಲ್ಲಾ ಸಂಸ್ಕೃತ ಅಧ್ಯಾಪಕ ವರ್ಗದವರು ಉಪಸ್ಥಿತರಿದ್ದರು.
ಮೈತ್ರೇಯೀ ಗುರುಕುಲ ಮೂರುಕಜೆ ಇಲ್ಲಿನ ನಾಲ್ವರು ಛಾತ್ರೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಪದವಿ ವಿಭಾಗದ ಸಂಸ್ಕೃತ ಉಪನ್ಯಾಸಕಿ ಪ್ರಸನ್ನಾ ಸಮಾರೋಪ ಕಾರ್ಯಕ್ರಮ ನಿರ್ವಹಿಸಿದರು.
