ಬಂಟ್ವಾಳ: ಕಳೆದೆರಡು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಕಲ್ಲಡ್ಕ -ಸಾರಡ್ಕ ರಾಜ್ಯ ಹೆದ್ದಾರಿ ಕಾಮಗಾರಿ ಕೂಡಲೇ ಕೈಗೆತ್ತಿಕೊಳ್ಳಲು ಸರಕಾರದ ಗಮನ ಸೆಳೆಯುವಂತೆ ರೈತರ ನಿಯೋಗ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರನ್ನು ಭೇಟಿಯಗಿ ಮನವಿ ಮೂಲಕ ಒತ್ತಾಯಿಸಿತು .

ಜಿಲ್ಲಾ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಶ್ರೀಧರ ಶೆಟ್ಟಿಬೈಲು ಗುತ್ತು ,ರಾಜ್ಯ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿ ಕಂಬಳಗುತ್ತು, ಬಂಟ್ವಾಳ ತಾಲೂಕು ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಮಾಜಿ ಮಂಡಲ ಪ್ರಧಾನ ಮುರುವ ಮಹಾಬಲ ಭಟ್,ಕಾರ್ಯದರ್ಶಿ ಎನ್.ಕೆ. ಇದಿನಬ್ಬ, ಸುದೇಶ್ ಮಯ್ಯ, ಸಂಚಾಲಕ ರೋನಾಲ್ಡ್ ಡಿ’ಸೋಜ, ರೈತ ಮುಖಂಡ ರಾಮಣ್ಣ ಶೆಟ್ಟಿ ಕರೋಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಈ ಕುರಿತಾಗಿ ಲೋಕೋಪಯೋಗಿ ಇಲಾಖೆ ಸರ್ವೆ, ಕಂದಾಯ ಇಲಾಖೆ,ರೈತ ಸಂಘದ ಸದಸ್ಯರ ಜಂಟಿ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕಾಗಿ ಪ್ರಯತ್ನಿಸುವುದಾಗಿ ತಹಶೀಲ್ದಾರ್ ಮಂಜುನಾಥ್ ನಿಯೋಗಕ್ಕೆ ಭರವಸೆ ನೀಡಿದರು.
