ಗುರುಪುರ : ಕೃಷಿ ಇಲಾಖೆ ಮಂಗಳೂರು, ಗುರುಪುರ ವ್ಯ.ಸೇ.ಸ.ಸಂಘ(ನಿ), ವಾಮಂಜೂರು ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ(ರಿ) ಇದರ ಜಂಟಿ ಆಶ್ರಯದಲ್ಲಿ ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರು ಅ. ೨೨ರಂದು ಆಯೋಜಿಸಲಾದ `ಕೃಷಿ ಗೋಷ್ಠಿ’ ಸಮಾರೋಪ ಸಮಾರಂಭ ಗುರುಪುರ ವ್ಯ.ಸೇ.ಸ. ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಗುರುಪುರ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರು ಮಾತನಾಡಿ, ೯೦ರ ದಶಕದಿಂದೀಚೆಗೆ ಕ್ಷೀಣಿಸಿದೆ. ಹಾಗಾಗಿ ಇದು ರೈತರಾದ ನಾವು ಸಂಭ್ರಮಿಸುವ ಕಾಲವಲ್ಲ. ಕೃಷಿ ಉಳಿಸಿ, ಮತ್ತೊಂದು ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಚಿಂತಿಸಬೇಕಾದ ಕಾಲ ಇದು. ಕೃಷಿ ಕಷ್ಟ ಬಲ್ಲವರೇ ಬಲ್ಲ ಎಂದರು.

ಕೃಷಿಕ ಶಿವರಾಮ ಮಲ್ಲಿ ಅವರು ಮಾತನಾಡಿ, ಹಿಂದೆ ಕೃಷಿಗೆ ಮಹತ್ವ ಇತ್ತು. ಈಗ ನಾವೇ ಮಕ್ಕಳಿಗೆ ಅನ್ಯ ಉದ್ಯೋಗತ್ತ ದಾರಿ ಮಾಡಿ ಕೊಡುತ್ತಿದ್ದೇವೆ. ಕೃಷಿ ಕಷ್ಟವಾಗುತ್ತಿದೆ, ಕೂಲಿಯಾಳುಗಳು ಸಿಗುತ್ತಿಲ್ಲ. ಕೃಷಿ ಭೂಮಿಯು ಲೇಔಟ್ ಆಗಿ ಪರಿವರ್ತನೆಗೊಳ್ಳುತ್ತಿದೆ. ವೇದಿಕೆಗಳು ಅಥವಾ ಇಂತಹ ಕಾರ್ಯಕ್ರಮಗಳಿಗೆ ಕೃಷಿ ಸೀಮಿತವಾಗಬಾರದು. ಇನ್ನಷ್ಟು ವಿಭಿನ್ನ ರೀತಿಯಲ್ಲಿ ಚಿಂತಿಸಬೇಕು ಎಂದು ಭಿನ್ನವಿಸಿಕೊಂಡರು.

ದೀಪ ಬೆಳಗಿಸಿದ ಅನಂತ ಉಪಾಧ್ಯಾಯ ಸಂಕೇಸ ಆಶೀರ್ವಚನ ನೀಡಿದರು. ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ತ್ರೀವೇಣಿ ರಾವ್, ಅಶ್ವಿನ್ ಶೆಟ್ಟಿ ಬೊಂಡAತಿಲಗುತ್ತು, ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಸಂಗೀತಾ ಆರ್. ನಾಯಕ್ ಕುಡುಪು, ವೆಂಕಟೇಶ ನಾವಡ ಪೊಳಲಿ ಮಾತನಾಡಿದರು. ಕೃಷಿ ಹಾಗೂ ಇತರ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಅಶ್ವಿನ್ ಶೆಟ್ಟಿ ಬೊಂಡAತಿಲಗುತ್ತು ಸ್ವಾಗತಿಸಿ ನಿರೂಪಿಸಿದರು. ಪ್ರಮುಖರಾದ ಡೆನ್ನಿಸ್ ಡಿ’ಸೋಜ ಬಜ್ಪೆ, ಲೋಕೇಶ್ ಭಂಡಾರಿ ಕಾವೂರು, ಸೆಲಿನ್ ಡಿಮೆಲ್ಲೊ, ಚಿತ್ತರಂಜನ್ ಬೋಳಾರ, ಚಂದ್ರಶೇಖರ ಕುಮಾರ್ ಮಂಗಳೂರು, ಸೋಹನ್ ಅತಿಕಾರಿ ಗಂಜಿಮಠ, ಅಝೀಝ್ ವಾಮಂಜೂರು, ಎ. ಎನ್. ಇಬ್ರಾಹಿ ಅಡ್ಡೂರು, ಹರೀಶ್ ಕುಮಾರ್ ಮೂಡುಶೆಡ್ಡೆ ಉಪಸ್ಥಿತರಿದ್ದರು. ಗುರುಪುರ ವ್ಯ.ಸೇ.ಸ.ಸಂಘದ ಸಿಬ್ಬಂದಿ ಶ್ರೀದೇವಿ ವಂದಿಸಿದರು.

By Suddi9

Leave a Reply

Your email address will not be published. Required fields are marked *