oplus_2097152
ಬಂಟ್ವಾಳ : ಬಂಟ್ವಾಳ ತಾಲೂಕಿನ ರಾಯಿ, ಕೊಯಿಲ ಅರಳ ಗ್ರಾಮಗಳನ್ನೊಳಗೊಂಡ ಯಕ್ಷ ಕೌಸ್ತುಭ ನಾಟ್ಯ ಅಧ್ಯಯನ ಕೇಂದ್ರ ಕೊಯಿಲ ಇದರ ವತಿಯಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ  ಯಕ್ಷ ಸಂಭ್ರಮ ೨೦೨೬, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಪ್ರಶಸ್ತಿ,ಸಮ್ಮಾನ ಕಾರ್ಯಕ್ರಮ ರಾಯಿ ಶ್ರೀಯಾ ಗಾರ್ಡನ್ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆಯಿತು.
ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಆಸ್ರಣ್ಣರಾದ ವೇ.ಮೂ. ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅವರು ಆಶೀರ್ವಚನ ನೀಡಿ ಮಾತನಾಡಿ, ಯಕ್ಷಗಾನ ಎಲ್ಲ ರೀತಿಯ ಕಲೆಯ ಮೂಲಕ ಅಲೌಕಿಕವಾದ ಭ್ರಮಾಲೋಕವನ್ನು ತೋರಿಸಿ ಸಂತೋಷವನ್ನು ನೀಡಿ ಸಂಭ್ರಮವನ್ನುಂಟು ಮಾಡುವ  ಕಲೆಯಾಗಿದೆ ಎಂದು ನುಡಿದರು.
 
 ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅದ್ಭುತ ಕಲೆಯಾದ ಯಕ್ಷಗಾನಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ಯಕ್ಷಗಾನ ತರಬೇತಿ ಕೇಂದ್ರಗಳ ಕಾರ್ಯ ಅಭಿನಂದನೀಯ ಎಂದು ಹೇಳಿದರು. 
ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನವೆಂಬುದು ಅನರ್ಘ್ಯ ಕಲಾವಿದರೆಂಬ ರತ್ನಗಳಿಂದ ಕೂಡಿದ ಸಮುದ್ರ. ಸಾಧನೆಯಿಂದ ಉತ್ತಮ ಕಲಾವಿದರಾಗಬೇಕು. ಯಕ್ಷಗಾನದಿಂದ ಆಸಕ್ತರು, ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ದೊರಕುತ್ತದೆ ಎಂದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ, ಮಾವಂತೂರು ಶ್ರೀ ಬಲವಂಡಿ ಕ್ಷೇತ್ರದ ಗಡಿ ಪ್ರಧಾನರಾದ ದುರ್ಗಾದಾಸ್ ಶೆಟ್ಟಿ ಮಾವಂತೂರು, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ ಗೇರುಕಟ್ಟೆ, ರಾಯಿ ಶ್ರೀ ಮಹಾಲಿಂಗೇಶ್‌ವರ ದೇವಸ್ಥಾನದ ಅರ್ಚಕ ದಿನೇಶ್ ಭಟ್ ದೈಲ, ಹೊಕ್ಕಾಡಿಗೋಳಿ ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಸಿದ್ದಕಟ್ಟೆ ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಬ್ಯಾಂಕ್ ಅಽಕಾರಿ ಸಂತೋಷ್ ಕುಮಾರ್ ಚೌಟ, ಪ್ರಗತಿಪರ ಕೃಷಿಕ ಚಂದ್ರಶೇಖರ ಗೌಡ ಕಾರಂಬಡೆ, ಗುತ್ತಿಗೆದಾರ ಪ್ರವೀಣ್ ಅಂಚನ್, ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಅಧ್ಯಕ್ಷ ಸಂತೋಷ್ ಶಿವನಗರ, ಕೊಯಿಲ ಗುರುಗಣೇಶ್ ಭಜನ ಮಂಡಳಿ ಅಧ್ಯಕ್ಷ ಕೀರ್ತನ್, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ, ಸಂಘದ ಸಂಚಾಲಕ ಸಂತೋಷ್ ಅಂಚನ್ ಕೊಯಿಲ, ಭಾಗವತ ಧನಂಜಯ ಕೊಯಿಲ , ಶ್ರುತಿ ಪ್ರೇಮ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ 
ಈ ಸಂದರ್ಭದಲ್ಲಿ ಯಕ್ಷಗುರುಗಳಾದ ಪ್ರೇಮ್ ರಾಜ್ ಕೊಯಿಲ ಅವರಿಗೆ ಯಕ್ಷ ಕೌಸ್ತುಭ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರಾದ ಸರಪಾಡಿ ಅಶೋಕ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ನಿಖಿಲ್ ಕೊಯಿಲ, ಹರಿಪ್ರಸಾದ್ ರಾವ್, ನವೀನ್ ಚಂದ್ರ ಅಂಚನ್,ಆನಂದ ಪಡ್ರೆ, ದುರ್ಗಾದಾಸ್ ಶೆಟ್ಟಿ ಮಾವಂತೂರು, ವಸಂತ ಅಣ್ಣಳಿಕೆ,ಸಂತೋಷ್ ಅಂಚನ್, ದಾಸಪ್ಪ ಪರವ, ರಾಘವ ಗೇರುಕಟ್ಟೆ , ಧನಂಜಯ ಕೊಯಿಲ ಅವರನ್ನು ಸಮ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.
ಸಂಘದ ಅಧ್ಯಕ್ಷ ಚಂದ್ರಶೇಖರ ಗೌಡ ಮತ್ತಾವು ಸ್ವಾಗತಿಸಿ, ಪ್ರಸ್ತಾವಿಸಿದರು. ಪ್ರೇಮ್ ರಾಜ್ ಕೊಯಿಲ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.        
ಮಧ್ಯಾಹ್ನ ಚೌಕಿ ಪೂಜೆ ಬಳಿಕ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರ.ಅರ್ಚಕ ರಾಮಚಂದ್ರ ಭಟ್ ದೈಲ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮಾವಂತೂರು ಶ್ರೀ ಮಹಾ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮರಾಜ ಬಲ್ಲಾಳ್ ಅವರು ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ-ಪ್ರಮೀಳಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಿತು

By Suddi9

Leave a Reply

Your email address will not be published. Required fields are marked *