ಗುರುಪುರ : ದ.ಕ. ಜಿಲ್ಲಾ ಮಡಿವಾಳರ ಸಂಘ(ರಿ), ರಜಕ ಯೂತ್(ರಿ) ಮಹಿಳಾ ಘಟಕ ಕುಡ್ಲ ಇದರ ಜಂಟಿ ಆಶ್ರಯ ಹಾಗೂ ತಾಲೂಕು ಸಂಘಗಳ ಸಹಕಾರದಲ್ಲಿ ಅ. ೨೩ರಂದು ಗುರುಪುರ ಕುಕ್ಕುದಕಟ್ಟೆಯ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಎದುರಿನ ಭಂಡಾರದಮನೆ ಒಡೆತನದ `ಬಂಡಿ’ ಗದ್ದೆಯಲ್ಲಿ `ಕೆರ‍್ದ ಕಂಡೊಡೊAಜಿ ದಿನ-೨೦೨೬’ ಅದ್ದೂರಿಯಿಂದ ಜರುಗಿತು.

ದೀಪ ಬೆಳಗಿಸಿ, ತೆಂಗಿನ ಹಿಂಗಾರ ಅರಳಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ದೋಣಿಂಜೆಗುತ್ತಿನ ಪ್ರಧಾನ ಗಡಿಕಾರ ಪ್ರಮೋದ್ ಕುಮಾರ್ ರೈ ಅವರು ಮಾತನಾಡಿ, ನಮ್ಮ ಹಿರಿಯರು ಹಾಕಿ ಕೊಟ್ಟಿರುವ ಕೃಷಿ ಪರಂಪರೆಯ ಹಿನ್ನೆಲೆಯಲ್ಲಿ ಇಂದು ಕೆಸರ್‌ಡೊಂಜಿ ದಿನ, ಕೆರ‍್ದ ಗೊಬ್ಬು ನಡೆಯುತ್ತಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಮಣ್ಣಿನ ಸಂಸ್ಕೃತಿಯ ಮಹತ್ವ ತಿಳಿಸಿ ಕೊಡಲು ಪ್ರಯತ್ನಿಸುತ್ತಿದ್ದೇವೆ. ದೈವಾರಾಧನೆಯಲ್ಲಿ ನಿರ್ದಿಷ್ಟ ಸ್ಥಾನಮಾನ ಕಂಡುಕೊAಡಿರುವ ಮಡಿವಾಳ ಸಮಾಜ ಇನ್ನಷ್ಟು ಬಲಿಷ್ಟಗೊಳ್ಳಬೇಕು ಎಂದರು.

ಮೂಳೂರು ಮುಂಡಿತ್ತಾಯ ದೈವದ ದರ್ಶನ ಪಾತ್ರಿ ತಿಮ್ಮ ಯಾನೆ ಚಂದ್ರಹಾಸ ಪೂಜಾರಿ ಕೌಡೂರು ಮಾತನಾಡಿ, ವಕೀಲರಿಲ್ಲದೆ ನ್ಯಾಯವಿಲ್ಲ, ವೈದ್ಯರಿಲ್ಲದೆ ಆರೋಗ್ಯವಿಲ್ಲ, ಇಂಜಿನಿಯರ್ ಇಲ್ಲದೆ ಕಟ್ಟಡವಿಲ್ಲ. ಆದರೆ ಕೃಷಿಕನಿಲ್ಲದೆ ಹೋದರೆ ಈ ಮೂವರಿಗೂ ಅಸ್ತಿತ್ವವಿಲ್ಲ. ಮಡಿವಾಳ ಸಮಾಜ ಶೈಕ್ಷಣಿಕವಾಗಿ ಮುಂಚೂಣಿಗೆ ಬರಬೇಕು. ಐಎಎಸ್, ಐಪಿಎಸ್‌ನಂತ ಉನ್ನತ ಪದವಿ ಗಳಿಸಬೇಕು ಎಂದು ಹೇಳಿದರು.

ಹುಬ್ಬಳ್ಳಿಯ ಹೋಟೆಲ್ ಉದ್ಯಮಿ ಡಾ. ಸರಳಾ ಆರ್, ಕಾಂಗ್ರೆಸ್ ಮುಖಂಡ ಪ್ರಕಾಶ್ ಬಿ. ಸಾಲ್ಯಾನ್ ಹಾಗೂ ಮುಂಡಿತ್ತಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು ಅವರು ಕೃಷಿ, ಕೆಸರ್, ಮಣ್ಣಿನ ಋಣದ ಬಗ್ಗೆ ಮಾತನಾಡಿದರು. ಸಂಘದ ವತಿಯಿಂದ ಚಂದ್ರಹಾಸ ಪೂಜಾರಿ ಕೌಡೂರು ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮೋಹನ ಅಳಪೆ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಸಂಘದ ಗೌರವಾಧ್ಯಕ್ಷ ಪ್ರಕಾಶ್ ಬಿ. ಎನ್, ಉದ್ಯಮಿ ಸದಾನಂದ ಪುತ್ರನ್, ಮೆಸ್ಕಾಂ ಅಧಿಕಾರಿ ಗಣೇಶ್ ಕುಂದರ್, ಬಸ್ ಮಾಲಕ ರಾಮಕೃಷ್ಣ ವಾಮಂಜೂರು, ಪುರಂದರ ಮಲ್ಲಿ ದೋಣಿಂಜೆಗುತ್ತು, ಉದ್ಯಮಿ ವಿಜಯ್ ಶೆಟ್ಟಿ ಹಾಗೂ ಸಂಘ, ರಜಕ ಯೂತ್ ಮತ್ತು ತಾಲೂಕು ಸಂಘಗಳ ಪದಾಧಿಕಾರಿಗಳು, ಸದಸ್ಯರು, ಮಡಿವಾಳ ಸಮಾಜದ ನೂರಾರು ಹಿರಿ-ಕಿರಿಯರಿದ್ದರು. ಸೇವಾ ಬ್ರಿಗೇಡ್ ಗುರುಪುರ ಪದಾಧಿಕಾರಿಗಳು ಸಹಕರಿಸಿದರು. ಎಂಆರ್‌ಪಿಎಲ್ ಉದ್ಯೋಗಿ ದೀಕ್ಷಿತಾ ಆರ್., ನಿರೂಪಿಸಿ ವಂದಿಸಿದರು. ಬಳಿಕ ಬಂಡಿ ಗದ್ದೆಯಲ್ಲಿ ಆಯೋಜಿಸಲಾದ ಕೆರ‍್ಡೊಂಜಿ ದಿನಕ್ಕೆ ಸಾಂಪ್ರದಾಯಿಕ ಶೈಲಿಯಲ್ಲಿ ಚಾಲನೆ ನೀಡಲಾಯಿತು. ಆಟೋಟ ಹಾಗೂ `ತುಳುನಾಡ ವೈಭವ’ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ತುಳುನಾಡ ಊಟೋಪಚಾರ ನಡೆಯಿತು.

By Suddi9

Leave a Reply

Your email address will not be published. Required fields are marked *