ಬಂಟ್ವಾಳ : ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸ.ಪ್ರ.ದ.ಕಾಲೇಜಿನ ಅತಿಥಿ ಉಪನ್ಯಾಸಕ ವಿಕಾಸ್ ಎಚ್.(52) ಅವರು ಕಾಲೇಜಿನ ಆವರಣದಲ್ಲಿ ಕುಳಿತಿರುವಾಗ ಹೃದಯಾಘಾತಕ್ಕೊಳಗಾಗಿ ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದರು.

ಕಾಲೇಜಿನ ವಿದ್ಯಾಥರ್ಿಗಳಿಗೆ ಕ್ರೀಡಾಕೂಟ ನಡೆಯುತ್ತಿರುವಾಗ ಕ್ರೀಡಾಂಗಣದ ಬದಿಯಲ್ಲಿ ಕುಳಿತು ಕ್ರೀಡಾಕೂಟವನ್ನು ವೀಕ್ಷಿಸುತ್ತಿದ್ದರು. ಮಧ್ಯಾಹ್ನ ಸುಮಾರು 12.40ರ ಹೊತ್ತಿಗೆ ಕುಳಿತಲ್ಲಿಯೇ ಪಕ್ಕಕ್ಕೆ ವಾಲಿದ್ದರು. ಇದನ್ನು ಗಮನಿಸಿದ ವಿದ್ಯಾಥರ್ಿಗಳು ಮತ್ತು ಉಪನ್ಯಾಸಕರ ಕರೆಯ ಮೇರೆಗೆ ಸ್ಥಳೀಯ ವೈದ್ಯರು ಆಗಮಿಸಿ ಪರೀಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಉಪನ್ಯಾಸಕ ವಿದ್ಯಾಧರ ಹೆಗ್ಡೆ ಮತ್ತಿತರರು ಅವರನ್ನು ಮೂಡಬಿದಿರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅದಾಗಲೇ ಅವರು ಮೃತ ಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದರು.
ಮೂಲತಃ ಬೈಂದೂರಿನವರಾದ ವಿಕಾಸ ಅವರು ಮೂಡಬಿದಿರೆಯಲ್ಲಿ ಪತ್ನಿ ಮನೆಯಲ್ಲಿ ವಾಸವಾಗಿದ್ದರು. ಕೊಕ್ರಾಡಿ ಪಿ.ಯು. ಕಾಲೇಜಿನಲ್ಲೂ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರ ನಿಧನದ ಶೋಕಾರ್ಥ ಕ್ರೀಡಾಕೂಟವನ್ನು ಸ್ಥಗಿತಗೊಳಿಸಿ ಕಾಲೇಜಿಗೆ ರಜೆ ಸಾರಲಾಯಿತು. ಮೃತರು ಪತ್ನಿಯನ್ನು ಅಗಲಿದ್ದಾರೆ.
ಸಚಿವ ಬಿ.ರಮಾನಾಥ ರೈ , ಪ್ರಾಂಶುಪಾಲ ಪ್ರೊ|ಸತ್ಯನಾರಾಯಣ ಭಟ್, ಕಾಲೇಜು ಅಭಿವೃದ್ಧಿ ಸಮಿತಿ ಕಾಯರ್ಾಧ್ಯಕ್ಷ ಲೋಕೇಶ್ ಶೆಟ್ಟಿ , ಸಂಗಬೆಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭು ಮೊದಲಾದವರು ಸಂತಾಪ ಸೂಚಿಸಿದ್ದಾರೆ.
