ಬಂಟ್ವಾಳ : ಕರುವೊಂದನ್ನು ಕೊಂಡೊಯ್ಯುತ್ತಿರುವಾಗ ಸಾರ್ವಜನಿಕರು ತಡೆದು ನಿಲ್ಲಿಸಿ ಹಲ್ಲೆಗೈದ ಘಟನೆ ಡಿ.18ರಂದು ರಾತ್ರಿ ಪುಂಜಾಲಕಟ್ಟೆ ಸಮೀಪದ ಮಾಲಾಡಿ ಗ್ರಾಮದ ಊರ್ಲ ಎಂಬಲ್ಲಿ ಸಂಭವಿಸಿದೆ.
ಹಲ್ಲೆಗೈದವರ ಪೈಕಿ ಸ್ಥಳೀಯರಾದ ಹೊನ್ನಯ್ಯ, ಹರಿಪ್ರಸಾದ್, ಪ್ರವೀಣ್ ಎಂಬವರನ್ನು ಪುಂಜಾಲಕಟ್ಟೆ ಪೊಲೀಸರು ಬಂಸಿದ್ದು ಅವರನ್ನು ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಲಾಗಿದೆ.
ಕುಕ್ಕಳ ಗ್ರಾಮದ ಮಂಜಲಪಲ್ಕೆ ಎಂಬಲ್ಲಿನ ಅಬ್ದುಲ್ ಹಮೀದ್ ಎಂಬವರು ಗಂಡು ಕರುವೊಂದನ್ನು ಊರ್ಲದ ಮಹಿಳೆಯೊಬ್ಬರಿಂದ ಖರೀದಿಸಿ ಕೊಂಡೊಯ್ಯುತ್ತಿರುವಾಗ ಏಳೆಂಟು ಜನ ತಡೆದು ನಿಲ್ಲಿಸಿ ದೊಣ್ಣೆಯಿಂದ ಹಲ್ಲೆಗೈದಿದ್ದರು. ಈ ವೇಳೆ ವಿಭಿನ್ನ ಕೋಮುಗಳ ಸುಮಾರು ಇನ್ನೂರರಷ್ಟು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಮಾಹಿತಿ ತಿಳಿದ ಪೊಲೀಸರು ತತ್ಕ್ಷಣ ಸ್ಥಳಕ್ಕೆ ಧಾವಿಸಿ ಕರು ಹಾಗೂ ಹಲ್ಲೆಗೈದ ಮೂವರ ಸಹಿತ ಹಲ್ಲೆಗೊಳಗಾದವರನ್ನು ಠಾಣೆಗೆ ಕರೆತಂದಿದ್ದರು. ವಿಚಾರಣೆಯಲ್ಲಿ ಅಬ್ದುಲ್ ಹಮೀದ್ ಅವರು ಕರುವನ್ನು ಸಾಕಲು ಖರೀದಿಸಿರುವುದಾಗಿ ತಿಳಿಸಿದ್ದರು. ಆರೋಪಿಗಳ ಮೇಲೆ ಕಲಂ 324ರ ಪ್ರಕಾರ ಹಲ್ಲೆ ಪ್ರಕರಣ ದಾಖಲಿಸಲಾಗಿದ್ದು ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಕರುವನ್ನು ಠಾಣೆಯಲ್ಲಿರಿಸಲಾಗಿದೆ.
ಈ ನಡುವೆ ಅಮಾಯಕರನ್ನು ಪೊಲೀಸರು ಬಂಸಿದ್ದಾರೆಂದು ಠಾಣೆಯಲ್ಲಿ ಜನ ಜಮಾಯಿಸಿದ್ದರು. ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಠಾಣೆಗೆ ಆಗಮಿಸಿ ಇತ್ತಂಡಗಳೊಡನೆ ಮಾತುಕತೆ ನಡೆಸಿದರು. ಠಾಣಾಕಾರಿ ಲತೇಶ್ ಕುಮಾರ್ ಅವರು ಶಾಂತಿ ಕಾಪಾಡುವಂತೆ ವಿನಂತಿಸಿದ್ದರು.

By Suddi9

Leave a Reply

Your email address will not be published. Required fields are marked *