ಬಂಟ್ವಾಳ : ಸಮಾಜ ಬಾಂಧವರ ಕಷ್ಟ- ಸುಖಗಳನ್ನು ಅರಿಯಲು ಕುಟುಂಬ ಮಿಲನ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಮಾಜಿ ಶಾಸಕ ರುಕ್ಮಿಯ ಪೂಜಾರಿ ಏಳ್ತಿಮಾರು ಹೇಳಿದರು. ಅವರು ಭಾನುವಾರ ವೀರಕಂಭ ಗ್ರಾಮದ ತೆಕ್ಕಿಪಾಪು ಪ್ರಶಾಂತ್ ಪೂಜಾರಿ ಅವರ ಮನೆಯ ವಠಾರದಲ್ಲಿ ಮೋನಪ್ಪ ಪೂಜಾರಿ ತೆಕ್ಕಿಪಾಪು ಬೇದಿಕೆಯಲ್ಲಿ ಬಿಲ್ಲವ ಸಂಘ( ರಿ) ಕಲ್ಲಡ್ಕ ವಲಯ, ಬಿಲ್ಲವ ಮಹಿಳಾ ಘಟಕ ಕಲ್ಲಡ್ಕ ವಲಯ ಆಶ್ರಯದಲ್ಲಿ ಗೋಳ್ತಮಜಲ್,ವೀರಕಂಭ, ಬಾಳ್ತಿಲ, ಅಮ್ಟೂರು, ಬೋಳಂತೂರು, ಬೊಂಡಲ, ಬಿಲ್ಲವ ಗ್ರಾಮ ಸಮಿತಿಗಳ ಸಹಕಾರದೊಂದಿಗೆ ನಡೆದ ಬಿಲ್ಲವ ಕುಟುಂಬ ಮಿಲನ – 2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಬಿಲ್ಲವ ಬಂಧುಗಳಿಗೆ ವಿವಿಧ ಮನರಂಜನಾ ಸ್ಪರ್ಧೆಗಳು, ಜಾನಪದ ನೃತ್ಯ ಕಾರ್ಯಕ್ರಮಗಳನ್ನು ನಡೆಸಲಾಯಿತಲ್ಲದೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಸುರೇಂದ್ರ ಅಮೀನ್ ಮರಕಡಬೈಲು, ಮನಮೋಹನ ಅಮ್ಟೂರು, ಗುರುವಪ್ಪ ಪೂಜಾರಿ ಪಾದೆ, ಕರುಣಾಕರ ಪೂಜಾರಿ ಬಲ್ಕಟ,ನಳಿನಿ ಮೋನಪ್ಪ ಪೂಜಾರಿ ತೆಕ್ಕಿಪಾಪು, ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ ಲಾವಣ್ಯ ಸುಂದರ, ಕಲ್ಲಡ್ಕ ಬಿಲ್ಲವ ಸಂಘದ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಚಂದ್ರಶೇಖರ್ ಸಾಲಿಯನ್ ಸ್ವಾಗತಿಸಿದರು. ಜಯಪ್ರಕಾಶ್ ತೆಕ್ಕಿಪಾಪ್ ಮನವಿ ಪತ್ರ ವಾಚಿಸಿದರು, ರವೀಂದ್ರ ಪಾದೆ ವಂದಿಸಿದರು. ದಿನೇಶ್ ಕೃಷ್ಣಕೋಡಿ, ಹಾಗೂ ಕೃತಿ ಪೂಜಾರ್ತಿ ಕುಂಟಿಪಾಪು ಕಾರ್ಯಕ್ರಮ ನಿರೂಪಿಸಿದರು.
