ಬಂಟ್ವಾಳ:  ದ.ಕ.ಜಿ.ಮಾ.ಹಿ.ಪ್ರಾ.ಶಾಲೆ ಪುದು ಪರಂಗಿಪೇಟೆ ಮಾಪ್ಲ ಶಾಲೆಯಿಂದ ಕಾವಳಮೂಡೂರು ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಬಡ್ತಿಗೊಂಡು ವರ್ಗಾವಣೆಗೊಂಡ ಅನುಸೂಯ ಹಾಗೂ ವಯೋನಿವೃತ್ತಿ ಹೊಂದಿದ ಜೆಸಿಂತ ಡಿ.ಸೋಜ ಅವರನ್ನು ಶಾಲೆಯ ವತಿಯಿಂದ ಗೌರವಿಸಿ ಬೀಳ್ಕೊಡಲಾಯಿತು.

ಟುಡೇ ಫೌಂಡೇಶನ್ ಅಧ್ಯಕ್ಷ ಉಮ್ಮರ್ ಫಾರೂಕ್ ಮಾತನಾಡಿ,ಶಿಕ್ಚಕಿಯರಾದ ಅನುಸೂಯ ಹಾಗೂ ಜೆಸಿಂತ ಅವರು ತಮ್ಮ ಸೇವಾವಧಿಯಲ್ಲಿ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ನೌಶಿದಾ, ಸದಸ್ಯೆ ಸಾರಮ್ಮ, ಟುಡೇ ಫೌಂಡೇಶನ್ ಸದಸ್ಯ ಮಜೀದ್, ತುಂಬೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರಮೇಶ್, ಎಸ್‌ಡಿಎಂಸಿ ಸದಸ್ಯರಾದ ಎಫ್.ಎಚ್. ಇಸ್ಮಾಯಿಲ್, ರಝಿಯಾ, ನಿವೃತ್ತ ಶಿಕ್ಷಕಿ ಯಮುನಾ ಹಾಗೂ ಶಿಕ್ಷಕಿಯರಾದ ಮಮತಾ, ಅರ್ಪಿತಾ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಜಯಂತಿ ಸ್ವಾಗತಿಸಿದರು. ಸಹಶಿಕ್ಷಕಿ ಬೆನೆದಿಕ್ತಾ ಲಸ್ರಾದೋ ವಂದಿಸಿದರು. ಸಹಶಿಕ್ಷಕಿ ಶಾಲೆಟ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು

By Suddi9

Leave a Reply

Your email address will not be published. Required fields are marked *