ಬಂಟ್ವಾಳ : ಕೆಲಿಂಜ ದ.ಕ.ಜಿ ಪಂ.ಹಿ. ಪ್ರಾ ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ  ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಮೀದ್ ಗುಳಿಗದ್ದೆ ಮಾತನಾಡಿ, ಹಿಂದಿನ ಕಾಲದಲ್ಲಿ ಆಟಿ ತಿಂಗಳು ಎಂದರೆ  ಕೃಷಿ ಕೆಲಸಗಳಿಲ್ಲದೆ ಉದ್ಯೋಗದ ಕೊರತೆ ಮತ್ತು ರೋಗರುಜಿನಗಳ ಕಾಲವಾಗಿತ್ತು. ಆಟಿ ತಿಂಗಳಿನಲ್ಲಿ ನಿಸರ್ಗದತ್ತವಾಗಿ ಸಿಗುವ ಸಸ್ಯಗಳನ್ನು ಬಳಸಿ ವಿಶಿಷ್ಟ ಆಹಾರ ತಯಾರಿಸುವುದು ಮತ್ತು ಹಳೆಯ ನೆನಪುಗಳನ್ನು ಮರುಕಳಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.


ಎಸ್.ಡಿ.ಎಂ.ಸಿ ಅಧ್ಯಕ್ಷ ಮೋಹಿತ್ ಶೆಟ್ಟಿ, ಹಿಂದಿನ ಕಾಲದ ತಿಂಡಿ – ತಿನಿಸುಗಳ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಶಿಕ್ಷಕಿಯಾದರ ಉಷಾ ಸುವರ್ಣ ಮತ್ತು ಅಶ್ವಿನಿ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ವೀರಕಂಬ ಗ್ರಾ. ಪಂ.ನ ಮಾಜಿ ಸದಸ್ಯರುಗಳಾದ ಜಯಪ್ರಸಾದ್ ಶೆಟ್ಟಿ ಮತ್ತು ಸಂದೀಪ್ ಪೂಜಾರಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಜಯಂತಿ , ಸದಸ್ಯ ಚಿದಾನಂದ ಗೌಡ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.


ಶಾಲಾ ಮುಖ್ಯೋಪಾಧ್ಯಾಯರಾದ ವನಿತಾ ಸ್ವಾಗತಿಸಿ, ಶಿಕ್ಷಕಿ ನಳಿನಾಕ್ಷಿ ನಿರೂಪಿಸಿದರು. ಶಿಕ್ಷಕಿ ರೂಪಿತಾ ವಂದಿಸಿದರು.
ಆಟಿಡೊಂಜಿ ದಿನದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳು ಮನೆಯಿಂದ ಸುಮಾರು 52 ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ತಂದಿದ್ದರು. ಈ ಸಂದರ್ಭ ಸೋಮಪ್ಪ ಸುರುಳಿ ಮೂಲೆ ಅವರ ತಂಡ ಆಟಿ ಕಳೆಂಜ ಪ್ರದರ್ಶನ ನೀಡಿತು. 

By Suddi9

Leave a Reply

Your email address will not be published. Required fields are marked *