ಬಂಟ್ವಾಳ: ಸ್ವಬೋಧ ಮತ್ತು ಶತ್ರುಬೋಧದ ಸ್ಪಷ್ಟ ಅರಿವಿಟ್ಟುಕೊಂಡರೆ ಮಾತ್ರ ಧರ್ಮಾಧಿಷ್ಟಿತ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬಹುದು ಎಂದು ಹಿಂದೂ ಸನಾತನ ಸಂಸ್ಥೆಯ ವಕ್ತಾರರಾದ  ಲಕ್ಷ್ಮಿ ಪೈ ಅವರು ಅಭಿಪ್ರಾಯ ಪಟ್ಟಿದ್ದಾರೆ.ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬಿ. ಸಿ. ರೋಡ್ ನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಘರ್ಷ ಮತ್ತು ಸಾಧನೆಯ ದಿಶೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು

ಇಂದು ದೇಶ ಹಾಗೂ ಧರ್ಮದ ಮೇಲಾಗುತ್ತಿರುವ ಆಘಾತಗಳು ಕೇವಲ ಗಡಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಅವು ನೇರವಾಗಿ ನಮ್ಮ ಮನೆಬಾಗಿಲಿಗೆ  ತಲುಪಿವೆ. ಭಯೋತ್ಪಾದನೆ ಮತ್ತು ನುಸುಳುವಿಕೆಯೊಂದಿಗೆ, ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’, ‘ವಕ್ಫ್ ಬೋರ್ಡ್‌’ ‘ಕಾರ್ಪೊರೇಟ್ ಜಿಹಾದ್’ ಮುಂತಾದ ವಿವಿಧ ಆಘಾತಗಳು  ಹಿಂದೂಗಳನ್ನು ಯೋಜನಾಬದ್ಧವಾಗಿ ಗುರಿಯಾಗಿಸಲಾಗುತ್ತಿದ್ದು,ಇದರ ಮೂಲಕ ದೇಶದ ಭೂ-ರಾಜಕೀಯ ನಕ್ಷೆ ಮತ್ತು ಜನಸಂಖ್ಯಾ ಸ್ಪೋಟದ ಗಣಿತವನ್ನು ಬದಲಾಯಿಸುವ ಷಡ್ಯಂತ್ರವನ್ನು ರೂಪಿಸಲಾಗುತ್ತಿದೆ ಎಂದರು.

ಹಿಂದೂ ಸಮಾಜವು ತನ್ನ ಸ್ವಬೋಧ ಹಾಗೂ ಶತ್ರುಬೋಧ ವನ್ನು ಜಾಗೃತಗೊಳಿಸದ ಹೊರತು ಎಲ್ಲಾ ದಿಕ್ಕುಗಳಿಂದ ಆಗುತ್ತಿರುವ ಆಘಾತಗಳನ್ನು ಪ್ರತಿರೋಧಿಸುವುದು ಅಸಾಧ್ಯ ಎಂದ ಅವರು ಹಿಂದೂ ಸಮಾಜ ದೇಶ ಮತ್ತು ಧರ್ಮದ ರಕ್ಷಣೆಗೆ ಕಡಿಬದ್ದರಾಗಬೇಕಾಗಿದೆ ಎಂದರು.
ತಾಯಿ ಮತ್ತು ಗುರುವಿನ ಮಾರ್ಗದರ್ಶನದಿಂದ  ಮಾನವನ ಉನ್ನತಿ ಸಾಧ್ಯ: ಅಡ್ಯಂತಾಯ

ಕತ್ತಲೆಯನ್ನು ದೂರಮಾಡಿ ಜ್ಞಾನದ ಬೆಳಕನ್ನು ನೀಡುವ ಗುರುವಿನ ಉಪದೇಶವು ಅತ್ಯಂತ ಉದಾತ್ತವಾದದ್ದು, ಹೀಗಾಗಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರತಿಯೊಂದು ಕ್ಷಣವೂ ಗುರುವಿನ ಸ್ಮರಣೆ ಮಾಡಬೇಕು. ವೇದವ್ಯಾಸರನ್ನು ಶ್ರದ್ಧೆಯಿಂದ ಪೂಜಿಸುವ ಪವಿತ್ರ ದಿನವೇ ಗುರು ಪೂರ್ಣಿಮೆ.
ತಾಯಿ ಮತ್ತು ಗುರು ಇಬ್ಬರ ಆಶೀರ್ವಾದ ಹಾಗೂ ಮಾರ್ಗದರ್ಶನವಿದ್ದಾಗ ಒಬ್ಬ ಸಾಮಾನ್ಯ ವ್ಯಕ್ತಿಯು ಜೀವನದಲ್ಲಿ ಉನ್ನತ ಮಟ್ಟಕ್ಕೇರಿ ಶ್ರೇಷ್ಠ ಎನಿಸಿಕೊಳ್ಳುತ್ತಾನೆ ಎಂದು ಹಿ.ಜಾ.ವೇ‌ಯ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಅವರು ತಿಳಿಸಿದರು.
ಗುರುಪೂರ್ಣಿಮೆಯ ಪ್ರಯುಕ್ತ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆ (ಗುರುಪೂಜೆ), ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸಂದೇಶ ವಾಚನದ ಕಿರುಚಿತ್ರ  ಪ್ರದರ್ಶಿಸಲಾಯಿತು.  ವಿವಿಧ ವಿಷಯಗಳಿಗೆ ಸಂಬಂಧಿಸಿ ಗ್ರಂಥ,ರಾಷ್ಟ್ರ-ಧರ್ಮ ವಿಷಯದ ಫಲಕ-ಪ್ರದರ್ಶನವನ್ನು‌ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ  ಜ್ಯೋತಿಷ್ಯರಾದ ಅನಿಲ್ ಪಂಡಿತ್, ಫರಂಗಿಪೇಟೆ ಉದ್ಯಮಿ ರಾಜಾರಾಮ್ ಬಲಿಪಗುಳಿ,ಡಾ. ಶಿವಪ್ರಸಾದ್ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
, ಇದೇ ವೇಳೆ ಸಮಿತಿಯ ವತಿಯಿಂದ ಹಿಂದೂಗಳಿಗೆ ಪ್ರಥಮ ಚಿಕಿತ್ಸೆ , ಅಗ್ನಿಶಾಮಕ ಮತ್ತು ಸ್ವರಕ್ಷಣಾ ತರಬೇತಿಯನ್ನು ಪಡೆದುಕೊಳ್ಳುವಂತೆ ಸೂಚಿಸಲಾಯಿತು

By Suddi9

Leave a Reply

Your email address will not be published. Required fields are marked *