ಬಂಟ್ವಾಳ: ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ  ಅಗ್ನಿ ಅವಘಡದಿಂದಾಗಿ ಹಾನಿಯಾದ ಚಂದ್ರಹಾಸ ಪೂಜಾರಿ ಅವರ ಮನೆಗೆ ಹಾಗೂಗಾಳು ,ಮಳೆಗೆ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆಯಲ್ಲಿ  ಜಯ ಸಪಲ್ಯ ಅವರ ಮನೆಯ ಛಾವಣಿ ಕುಸಿದು ಹಾನಿಗೊಳಗಾದ ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಅಗ್ನಿ ಅವಘಡದಿಂದಾಗಿ ಚಂದ್ರಹಾಸ ಪೂಜಾರಿ ಅವರ ಮನೆಯೊಳಗಿನ ಪೀಠೋಪಕರಣ,ಬಟ್ಟೆ ಬರೆ  ಹಾಗೂ ದಿನನಿತ್ಯದ ಬಳಕೆಯ ಬಹುತೇಕ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿರುವುದನ್ನು ವೀಕ್ಷಿಸಿ‌, ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದರು. ಬಳಿಕ ಸಂಬಂಧಿಸಿದ ಅಧಿಕಾರಿಗಳನ್ನು ದುಇರವಾಣಿ ಮೂಲಕ ಸಂಪರ್ಕಿಸಿ ಚರ್ಚಿಸಿದರು.

ಹಾಗೆಯೇ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ ಶಾಸಕರು ಸರಕಾರದ ನಿಯಮಾನುಸಾರ ಪರಿಹಾರ ಮತ್ತು ಅಗತ್ಯ ನೆರವು ದೊರೆಯುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀಕಾಂತ್ ಶೆಟ್ಟಿ ಸಜಿಪ, ಜಯಪ್ರಕಾಶ್ ಪೆರ್ವ, ಯೋಗೀಶ್ ಕೊಲ್ಯ, ಉಮೇಶ್ ಬಂಗೇರ ಸೇರಿದಂತೆ ಸ್ಥಳೀಯ ಪ್ರಮುಖರು,ಗ್ರಾಮಸ್ಥರು ಉಪಸ್ಥಿತರಿದ್ದರು.
ಮನೆಗೆ ಹಾನಿ ಸ್ಥಳಕ್ಕೆ ಭೇಟಿ:
ಬಳಿಕ ಶಾಸಕ ರಾಜೇಶ್ ನಾಯ್ಕ್ ಅವರು ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆಯಲ್ಲಿ ಗಾಳಿ, ಮಳೆಯಿಂದ ಜಯ ಸಪಲ್ಯ ಅವರ ಮನೆಯ ಛಾವಣಿ ಕುಸಿದು ಹಾನಿಗೊಳಗಾದ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಟುಂಬದ ಸದಸ್ಯರಿಂದ ಮಾಹಿತಿ‌ಪಡೆದ ಶಾಸಕರು ಹಾನಿಯನ್ನು ವೀಕ್ಷಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ತುರ್ತು ಪರಿಹಾರ ಹಾಗೂ ಅಗತ್ಯ ನೆರವನ್ನು ಶೀಘ್ರವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ  ಮಲ್ಲಿಕಾರ್ಜುನ್, ಪಿಡಿಒ ರಶ್ಮಿ ಆರ್. ಕಿಲ್ಲೆ, ಕಂದಾಯ ಇಲಾಖೆಯ ಅಧಿಕಾರಿ ರಿಟಾ ಡಿ’ಸೋಜಾ, ಮಾಜಿ ಪಂಚಾಯತ್ ಸದಸ್ಯ ರಘುವೀರ್ ಆಚಾರ್ಯ, ಸುಂದರ್, ರಾಮಚಂದ್ರ, ತಿರುಲೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *