ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದಿಂದ ವ್ಯಾಸ ಪೂರ್ಣಿಮಾ-ಗುರು ಪೂರ್ಣಿಮೆಯನ್ನು ಆಚರಿಸಲಾಯಿತು. ಪಡ್ನೂರಿನ ಬೇರಿಕೆ ಶಿಶುಮಂದಿರದ ಆಡಳಿತ ಮಂಡಳಿ ಸದಸ್ಯೆ ಪವಿತ್ರ ವಿಜಯನಾರಾಯಣ ಕುಳೂರು ಅವರು ಸಂಪನ್ಮೂಲ ವ್ಯಕ್ತಿಯಾಗಿ ಗುರು ಪೂರ್ಣಿಮೆಯ ಮಹತ್ವವನ್ನು ತಿಳಿಸಿದರು.

ವಿದ್ಯಾರ್ಥಿಗಳು ಶಿಕ್ಷಕರ ಪಾದಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಗುರುವಂದನೆ ಸಲ್ಲಿಸಿ ಗುರುಗಳ ಆಶೀರ್ವಾದವನ್ನು ಪಡೆದರು.
ವ್ಯಾಸ ಪೂರ್ಣಿಮೆ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ವಿಜೇತರಿಗೆ ಬಹುಮಾನ ವಿತರಣೆಯನ್ನು ಈ ಸಂದರ್ಭದಲ್ಲಿ ಮಾಡಲಾಯಿತು.
ಉಪಪ್ರಾಂಶುಪಾಲರಾದ ಸುಕನ್ಯಾ ಮಾತಾಜಿ ಹಾಗೂ ಸಂಸ್ಕೃತ ಉಪನ್ಯಾಸಕಿ ಪ್ರಸನ್ನಾ ಮಾತಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತ, ಧನ್ಯವಾದ ಸೇರಿದಂತೆ ಕಾರ್ಯಕ್ರಮ ನಿರ್ವಹಣೆಯು ಸಂಸ್ಕೃತ ಭಾಷೆಯಲ್ಲಿ ನೆರವೇರಿಸಲಾಯಿತು.
ವಿದ್ಯಾರ್ಥಿ ಗಳಾದ ಜಯಸೂರ್ಯ ಸ್ವಾಗತಿಸಿ, ಕು. ಅನನ್ಯಾ ವಂದಿಸಿದರು, ಕು. ಅಕ್ಷತಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.
