ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಬಂಟ್ವಾಳ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ 2026–27ನೇ ಸಾಲಿನ ಪಿಎಂ-ಆರ್‌ಕೆವಿವೈ  ಯೋಜನೆಯಡಿ ರೈತರಿಗೆ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮವು ಮಂಗಳವಾರ ಗೋಳ್ತಮಜಲು ಗ್ರಾಮದ ಅಮ್ಟೂರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಸಲಾಯಿತು.


ಮೋಹನರಾಜ್ ಚೌಟ ಪುಜೋಲಿಮಾರ್ ಗುತ್ತು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷರಾದ ರಮೇಶ್ ಶೆಟ್ಟಿಗಾರ್ಅಧ್ಯಕ್ಷತೆಯನ್ನು  ವಹಿಸಿದ್ದರು.‌
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಿಟ್ಲ ಕೇಂದ್ರಿಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ನಾಗರಾಜ್ ಅವರು “ಅಡಿಕೆ ಬೆಳೆಯಲ್ಲಿ ಸಮಗ್ರ ಪೀಡೆ ಹಾಗೂ ಪೋಷಕಾಂಶ ನಿರ್ವಹಣೆ” ಕುರಿತು ರೈತರಿಗೆ  ಮಾಹಿತಿ ನೀಡಿದರು.


ಬಂಟ್ವಾಳ ತಾಲೂಕು ಕೃಷಿ‌ಇಲಾಖೆಯ  ತಾಂತ್ರಿಕ ಕೃಷಿ ಅಧಿಕಾರಿ  ನಂದನ್  ಶೆಣೈ ಅವರು ಕೃಷಿ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ಪಾಣೆಮಂಗಳೂರು ವಲಯದ ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ  ಹನುಮಂತ ಕಾಲಗಿ ಅವರು 2026–27ನೇ ಸಾಲಿನ ರೈತರ ಬೆಳೆ ಸಮೀಕ್ಷೆ ಹಾಗೂ ಬೆಳೆ ನೋಂದಣಿ ಕುರಿತು ಮಾಹಿತಿ ನೀಡಿದರು.


ಗೋಳ್ತಮಜಲು ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಸುನಿಲ್ ಕುಮಾರ್,
ಗೋಳ್ತಮಜಲು ಆಶೀರ್ವಾದ ಸಂಜೀವಿನಿ ಒಕ್ಕೂಟ ದ ಅದ್ಯಕ್ಷೆ ವಿದ್ಯಾ ಕೊಟ್ಟಾರಿ, ಸಂಜೀವಿನಿ ಅಭಿಯಾನದ  ಘಟಕದ ವಲಯಮೇಲ್ವಿಚಾರಕರಾದ ಕುಸುಮ ಉಪಸ್ಥಿತರಿದ್ದರು.


ಮಂಗಳೂರು ಉಪವಿಭಾಗದ ಉಪ ಕೃಷಿ ನಿರ್ದೇಶಕರಾದ ಡಾ. ಅಶೋಕ್ ಪ್ರಸ್ತಾವನೆಗೈದರು. ವಿಜಯ ಪ್ರಕಾಶ್ ಅವರು ಪ್ರಾರ್ಥಿಸಿದರು. ಬಂಟ್ವಾಳ ತಾ. ಪಂ.ನ ಮಾಜಿ ಉಪಾಧ್ಯಕ್ಷರಾದ ದಿನೇಶ್ ಅಮ್ಟೂರು ಅವರು ಸ್ವಾಗತಿಸಿದರು, ಕೃಷಿ ಸಖಿ  ಪುಷ್ಪಾವತಿ ಅವರು  ನಿರೂಪಿಸಿದರು.ಮುಖ್ಯ ಪುಸ್ತಕ ಬರಹಗಾರರಾದ ಭವಾನಿ ವಂದಿಸಿದರು.


ಸುಮಾರು 140 ಮಂದಿ ಕೃಷಿಕರು ಭಾಗವಹಿಸಿ ಅಡಿಕೆ ಬೆಳೆಯ ಸಮಗ್ರ ನಿರ್ವಹಣೆ, ಕೃಷಿ ಇಲಾಖೆಯ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರಲ್ಲದೆ, ರೈತರು ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಂಡರು.  ಒಕ್ಕೂಟದ ಸಿಬ್ಬಂದಿಗಳು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *