ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ತಾಲೂಕು. ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ವಿಭಾಗದ ಆಶ್ರಯದಲ್ಲಿ ವಾಮದಪದವು ಬಸ್ತಿ ಕೋಡಿಯಲ್ಲಿ ನಡೆದ 2076 ನೇ ಮಧ್ಯವರ್ಜನ ಶಿಬಿರದಲ್ಲಿ ಪಾನಮುಕ್ತರಾದ ನವಜೀವನ ಸಮಿತಿ ಸದಸ್ಯರ ಸಭೆಯು ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನೆ ಕಚೇರಿಯ ಉನ್ನತಿ ಸೌಧದಲ್ಲಿ ಮಂಗಳವಾರ ನಡೆಸಲಾಯಿತು.

ಈ ನವಜೀವನ ಸಮಿತಿಗೆ “ಧರ್ಮಜ್ಯೋತಿ” ನವ ಜೀವನ ಸಮಿತಿ ಎಂದು ಹೆಸರಿಸಲಾಯಿತು. ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ರೊನಾಲ್ಡ್ ಡಿಸೋಜ ಅಮ್ಟಾಡಿ ಅವರುಸಮಿತಿಯ ಉದ್ಘಾಟನೆಗೈದು ಮಾತನಾಡಿ, ಪಾನಮುಕ್ತರಾಗಿ ಹೊಸ ಜೀವನ ಕಟ್ಟಿಕೊಳ್ಳಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅವಕಾಶ ದೊರೆತಿದ್ದು, ತಾವುಗಳು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಗುರುತಿಸುವಂತಾಗಬೇಕು ಎಂದು ಶುಭ ಹಾರೈಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ ಸಮಿತಿಯ ಸದಸ್ಯರ ಜವಾಬ್ದಾರಿ, ಕರ್ತವ್ಯಗಳು, ಕಾರ್ಯಕ್ರಮಗಳು, ಸಮಿತಿಗೆ ಯೋಜನೆಯಿಂದ ಸಿಗುವ ಸಹಕಾರಗಳ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ನವಜೀವನ ಸಮಿತಿಯ ಸದಸ್ಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ತಾಲೂಕು ಜನಜಾಗೃತಿ ಸದಸ್ಯರಾದ ಶೇಖರ್ ಸಾಮಾನಿ, ನವ ಜೀವನ ಸದಸ್ಯರಾದ ಶ್ರೀನಿವಾಸ ಪೂಜಾರಿ ಅಮ್ಟಾಡಿ, ಕೃಷ್ಣಪ್ಪ ಪೂಜಾರಿ ಕುರಿಯಾಳ, ಜಯರಾಜ್ ಗಾಂದೋಡಿ, ಸೇವಾಪ್ರತಿನಿಧಿಗಳಾದ ವನಿತಾ, ಪ್ರತಿಭಾ, ಕವಿತಾ ಹಾಗೂ 2076ನೇ ಮಧ್ಯವರ್ಜನ ಶಿಬಿರದ ಎಲ್ಲಾ ನವ ಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಬಿ ಮೋಡ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಆಶಾಲತಾ ಸ್ವಾಗತಿಸಿ, ನರಿಕೊಂಬು ಎ ಒಕ್ಕೂಟದ ಸೇವಾ ಪ್ರತಿನಿಧಿ ಕುಸುಮ ವಂದಿಸಿದರು. ಬಿ.ಸಿ.ರೋಡು ವಲಯದ ಮೇಲ್ವಿಚಾರಕ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು
