ಬಂಟ್ವಾಳ: ವೀರಕಂಭ ಗ್ರಾಮವನ್ನುವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಉಳಿಸಿಕೊಳ್ಳಬೇಕೆಂದು ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಆಗ್ರಹಿಸಿ ಮಂಗಳವಾರ ಮಜಿ ದ. ಕ. ಜಿ. ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದವೀರಕಂಭ ಗ್ರಾಮ ಪಂಚಾಯತ್ ನ 2026-27 ನೇ ಸಾಲಿನ ಪ್ರಥಮ ಹಂತದ
ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಬಂಟ್ವಾಳ ತಾ.ನ ಸಜಿಪಮುನ್ನೂರಿನಲ್ಲಿ ಆರಂಭವಾಗಲಿರುವ ಹೊಸ ಪೋಲಿಸ್ ಠಾಣಾ ವ್ಯಾಪ್ತಿಗೆ ವೀರಕಂಭ ಗ್ರಾಮವನ್ನು ಸೇರಿಸಿ ಸರಕಾರದ ಆದೇಶವಾಗಿರುವ ಬಗ್ಗೆ ಗ್ರಾಮ ಸಭೆಯಲ್ಲಿ ಗಮನ ಸೆಳೆದ ಗ್ರಾಮಸ್ಥರು, ವೀರಕಂಭ ಗ್ರಾಮಕ್ಕೆ ವಿಟ್ಲವು ಕೇವಲ 6 ಕಿ.ಮದೂರದಲ್ಲಿದ್ದು,ಜನಸಾಮಾನ್ಯರುಸುಲಭವಾಗಿಸಂಪರ್ಕಿಸಬಹುದಾಗಿದೆ.ಹಾಗಾಗಿ ವೀರಕಂಭ ಗ್ರಾಮವನ್ನು ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಣಯಕೈಗೊಳ್ಳುವಂತೆ ಒತ್ತಾಯಿಸಿದ ಹಿನ್ನಲೆಯಲ್ಲಿ ವೀರಕಂಬ ಗ್ರಾಮಚನ್ನು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಳಿಸಿಕೊಳ್ಳಬೇಕೆಂದು ಸಂಬಂಧಪಟ್ಟ ಪೊಲೀಸದ ವರಿಷ್ಠರನ್ನು ಹಾಗೂ ಸರಕಾರವನ್ನು ಆಗ್ರಹಿಸಿ ಪತ್ರ ಬರೆಯಲು ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಬಂಟ್ವಾಳ ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕ ನಿರ್ದೇಶಕರು ಹಾಗೂ ವೀರಕಂಭ ಗ್ರಾಮ ಪಂಚಾಯತ್ ನ ಆಡಳಿತಾಧಿಕಾರಿ ದಿನೇಶ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗಳಪದವು ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಯ ಬದಿಯಲ್ಲಿರುವ ಅಂಗಡಿ ಕಟ್ಟಡಗಳನ್ನು ಪಂಚಾಯತ್ ಸ್ವಾದೀನಕ್ಕೆ ಪಡಕೊಳ್ಳುವ ಬಗ್ಗೆ, ವಸತಿ ಯೋಜನೆಯಡಿಯಲ್ಲಿ ಮಂಜೂರಾದ ನಿವೇಶನ, 94ಸಿ ಅಡಿಯಲ್ಲಿ ಮಂಜೂರಾದ ನಿವೇಶನಗಳಲ್ಲಿರುವ ಹಾಲಿ ಮನೆಗಳ ದುರಸ್ಥಿಇಲ್ಲವೇ ನವೀಕರಣಗೊಳಿಸಲು ಬೂಡ ಅನುಮೋದನೆ ಇಲ್ಲದೆ ಪಂಚಾಯತ್ ಹಂತದಲ್ಲಿ ಕಟ್ಟಡ ಪರವಾನಿಗೆ ನೀಡಲು ಸಂಬಂಧಪಟ್ಟವರನ್ನು ಆಗ್ರಹಿಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಅದೇರೀತಿ ವೀರಕಂಭ ಗ್ರಾಮ ಪಂಚಾಯತ್ ಕಛೇರಿಗೆ ನಿವೇಶನ ಹಾಗೂ ಸಭಾಂಗಣವನ್ನು ಒಳಗೊಂಡ ಕಛೇರಿ ಕಟ್ಟಡಕ್ಕೆ ಸೂಕ್ತ ಅನುದಾನವನ್ನು ಮಂಜೂರು ಮಾಡುವಂತೆ ಸರಕಾರಕ್ಕೆ ಪತ್ರ ಬರೆಯಲು ಗ್ರಾಮ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಪಂಚಾಯತ್ ಕಾರ್ಯದರ್ಶಿ ಸವಿತ ಆಡಳಿತ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗೋಳ್ತ ಮಜಲು ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಳ್ಳುತ್ತಿರುವ ಪಂಚಾಯತ್ ಕಾರ್ಯದರ್ಶಿ ಸವಿತಾ ರವರನ್ನು ಗೌರವಿಸಿ ಅಭಿನಂದಿಸಲಾಯಿತು.
ವೀರಕಂಬ ಗ್ರಾಮ ವ್ಯಾಪ್ತಿಯ ಶಾಲಾ ಮುಖ್ಯ ಶಿಕ್ಷಕರು, ಆರೋಗ್ಯ ಸುರಕ್ಷಣಾಧಿಕಾರಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಪಂಚಾಯತ್ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಗ್ರಾಮಸ್ಥರು ತಮ್ಮ ವಿವಿಧ ಬೇಡಿಕೆಯ ಮನವಿ ಸಲ್ಲಿಸಿದರು.
ವೀರಕಂಭ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾ ಅವರು ಸ್ವಾಗತಿಸಿ, ನಿರೂಪಿಸಿದರು.
