ಬಂಟ್ವಾಳ:  ಬಿ ಸಿ ರೋಡ್ ಸಿಟಿ ರೋಟರಿ ಕ್ಲಬ್ ಅತ್ಯುನ್ನತ ಗೌರವ ಪ್ಲಾಟಿನಮ್ ಪ್ಲಸ್ ಪ್ರಶಸ್ತಿಗೆ ಭಾಜನವಾಗಿದೆ.

 ಮೈಸೂರಿನಲ್ಲಿ ಈಚೆಗೆ ನಡೆದ ರೋಟರಿ ಜಿಲ್ಲೆ 3181 ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಿಯ ಜಿಲ್ಲಾ ಗವರ್ನರ್ ರೊ.ಮೇಜರ್ ಡೋನರ್ ರಾಮಕೃಷ್ಣ ಪಿ ಕೆ ಯವರು ಕ್ಲಬ್ ನ ಪರವಾಗಿ ಅಧ್ಯಕ್ಷರಾದ ದಿವಾಕರ ಶೆಟ್ಟಿ ಯವರಿಗೆ ಪ್ರಶಸ್ತಿ  ಪ್ರಧಾನ ಮಾಡಿದರು. 
 
ಈ ಸಂದರ್ಭದಲ್ಲಿ ನಿಯೋಜಿತ ಡಿ ಜಿ ಯವರಾದ ಸತೀಶ್ ಬೋಳಾರ್, ಯಶಸ್ವಿ ಸೋಮಶೇಖರ್, ಪಿ ಡಿ ಜಿ ವಿಕ್ರಮ್ ದತ್ತ, ಎ.ಜಿ ಪದ್ಮನಾಭ ರೈ,ಬಿ .ಸಿ.ರೋಡು ಸಿಟಿರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾದ ಶೇಷಪ್ಪ ಮೂಲ್ಯ, ಸದಸ್ಯರಾದ ಜೋತಿಂದ್ರ ಶೆಟ್ಟಿ, ದಯಾನಂದ ರೈ, ಸುಂದರ್ ಬಂಗೇರ, ಪ್ರಶಾಂತ್ ಕಾರಂತ್, ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *