ಬಂಟ್ವಾಳ::ಪ್ರತಿಷ್ಠಿತ ರೋಟರಿ ಕ್ಲಬ್ ಬಂಟ್ವಾಳ ಇದರ 2026-27ನೇ ಸಾಲಿನನೂತನ ಅಧ್ಯಕ್ಷರಾಗಿ ರೊ. ರವಿಚಂದ್ರ ಬಂಟ್ವಾಳ ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾ

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.04 ರಂದು ಸಂಜೆ 7.00 ಗಂಟೆಗೆ ಬಿ.ಸಿ.ರೋಡಿನ ಬಿ.ಎ. ಸೋಮಯಾಜಿ ಮೆಮೋರಿಯಲ್ ರೋಟರಿ ಹಾಲ್ ನಲ್ಲಿ ನಡೆಯಲಿದ್ದು,ಮಾಜಿ ಜಿಲ್ಲಾ ಗವರ್ನರ್ ರೊ. ವಿಕ್ರಮ್ ದತ್ತ ಅವರು ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ನೂತನ ತಂಡಕ್ಕೆ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

2025-26ನೇ ಸಾಲಿನ ಅಧ್ಯಕ್ಷ ರೊ. ಬಸ್ತಿ ಮಾಧವ ಶೆಣೈ ಅವರ ನೇತೃತ್ವದಲ್ಲಿ ಕ್ಲಬ್ “ಡೈಮಂಡ್ ಪ್ಲಸ್” ಅತ್ಯುನ್ನತ ಪ್ರಶಸ್ತಿ ಸೇರಿದಂತೆ ಹಲವಾರು ಸಾಧನೆಗಳನ್ನು ಮಾಡಿದೆ. ರೋಟರಿಯ ಈ ವರ್ಷದ ಧ್ಯೇಯದಂತೆ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
