ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಹ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಶಂಕರಾಚಾರ್ಯ ಸಭಾಂಗಣದಲ್ಲಿ  ನಡೆಯಿತು.ಅತಿಥಿಗಳು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಕೃಷ್ಣನಿಗೆ  ಕ್ಷೀರಾಭಿಷೇಕ ಮಾಡುವ ಮೂಲಕ ಹಾಗೂ ನಾದಸ್ವರ ವಾದನಗಳೊಂದಿಗೆ ಭರತನಾಟ್ಯ , ಸಂಗೀತ ,ಕರಾಟೆ , ಸ್ಟೆಮ್, ತರಗತಿಗಳ ಉದ್ಘಾಟನೆಯನ್ನು  ನೆರವೇರಿಸಲಾಯಿತು. ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕರಾದ  ವಸಂತ ಮಾಧವ ಶ್ರೀಮಾನ್ ರವರು ಅಧ್ಯಕ್ಷತೆ ವಹಿಸಿದ್ದರು.


  ಅತಿಥಿಯಾಗಿ ಭಾಗವಹಿಸಿದ್ದ ಯಕ್ಷಗಾನ ಗುರುಗಳಾದ ಅಶ್ವಥ್ ಮಂಜನಾಡಿ ಯವರು ಮಾತನಾಡಿ ” ಸಮುದ್ರದಲ್ಲಿ ಅಲೆ ಮರದಲ್ಲಿ ಎಲೆ ಇದ್ದಂತೆ ಜೀವನದಲ್ಲಿ ಕಲೆ ಎಂಬುದು  ಮುಖ್ಯವಾಗಿದೆ” ಎಂದರು. ಸಂಗೀತ ಗುರುಗಳಾದ  ಕೃಷಾಚಾರ್ಯ ಬಂಟ್ವಾಳ, ಭರತನಾಟ್ಯ ಗುರುಗಳಾದ  ಪ್ರಭ. ಬಿ. ಶಂಕರ್ , ಕರಾಟೆ ಗುರುಗಳಾದ  ಸತೀಶ್, ಹಾಗೂ ಸ್ಟೆಮ್ ತರಬೇತುದಾರರಾದ  ಸಾವನ್ ,  ಪ್ರಾಂಶುಪಾಲರಾದ  ತಿರುಮಲೇಶ್ವರ ಪ್ರಶಾಂತ್ ಹಾಗೂ ಸಹಪಠ್ಯೇತರ ಚಟುವಟಿಕೆಗಳ ಸಂಯೋಜಕರಾದ   ನಿತಿನ್ ರವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನೀನಾದ್ ಕೈರಂಗಳ ನಿರೂಪಿಸಿ,  ಪ್ರಾಪ್ತಿ ಸ್ವಾಗತಿಸಿದಳು, ಅನರ್ಘ್ಯ ವಂದಿಸಿದರು.


ಸಹ ಪಠ್ಯೇತರ  ಚಟುವಟಿಕೆಗಳ ಉದ್ಘಾಟನಾ ಕಾರ‍್ಯಕ್ರಮ  ಜೂ.20 ರಂದು ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಶಂಕರಾಚರ‍್ಯ ಸಭಾಂಗಣದಲ್ಲಿ ಸಹ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ‍್ಯಕ್ರಮ ನೆರವೇರಿತು. ಅತಿಥಿಗಳು ದೀಪ ಪ್ರಜ್ವಲನೆಯ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿ ಅಭ್ಯಾಗತರು ಕೃಷ್ಣನಿಗೆ  ಕ್ಷೀರಾಭಿಷೇಕ ಮಾಡುವ ಮೂಲಕ ಹಾಗೂ ನಾದಸ್ವರ ವಾದನಗಳೊಂದಿಗೆ ಭರತನಾಟ್ಯ , ಸಂಗೀತ ,ಕರಾಟೆ , ಸ್ಟೆಮ್, ತರಗತಿಗಳ ಉದ್ಘಾಟನಾ ಕಾರ‍್ಯಕ್ರಮ ನೆರವೇರಿತು.

ಈ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕರಾದ ಶ್ರೀಯುತ ವಸಂತ ಮಾಧವ ಶ್ರೀಮಾನ್ ರವರು ವಹಿಸಿದ್ದರು. ಅತಿಥಿಗಳಾಗಿ ಯಕ್ಷಗಾನ ಗುರುಗಳಾದ ಶ್ರೀ ಅಶ್ವಥ್ ಮಂಜನಾಡಿ  ಮಾತನಾಡಿ ” ಸಮುದ್ರದಲ್ಲಿ ಅಲೆ ಮರದಲ್ಲಿ ಎಲೆ ಹಾಗೆಯೇ ಜೀವನದಲ್ಲಿ ಕಲೆ ಎಂಬುದು  ಮುಖ್ಯವಾಗಿದೆ” ಎಂದರು. ಕಾರ‍್ಯಕ್ರಮದಲ್ಲಿ ಸಂಗೀತ ಗುರುಗಳಾದ ಶ್ರೀ ಕೃಷಾಚರ‍್ಯ ಬಂಟ್ವಾಳ, ಭರತನಾಟ್ಯ ಗುರುಗಳಾದ ಶ್ರೀಮತಿ ಪ್ರಭ. ಬಿ. ಶಂಕರ್ , ಕರಾಟೆ ಗುರುಗಳಾದ ಶ್ರೀ ಸತೀಶ್, ಹಾಗೂ ಸ್ಟೆಮ್ ತರಬೇತುದಾರರಾದ  ಶ್ರೀ ಸಾವನ್ , ಹಾಗೂ ಪ್ರಾಂಶುಪಾಲರಾದ ಶ್ರೀ ತಿರುಮಲೇಶ್ವರ ಪ್ರಶಾಂತ್ ಶ್ರೀಮಾನ್, ಹಾಗೂ ಸಹಪಠ್ಯೇತರ ಚಟುವಟಿಕೆಗಳ ಸಂಯೋಜಕರಾದ  ಶ್ರೀ ನಿತಿನ್ ಶ್ರೀಮಾನ್ ರವರು ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ೯ನೇ ತರಗತಿಯ ನೀನಾದ್ ಕೈರಂಗಳ ನಿರೂಪಿಸಿ, ಎಂಟನೇ ತರಗತಿಯ ಪ್ರಾಪ್ತಿ ಸ್ವಾಗತಿಸಿ, ಅರ‍್ಘ್ಯ ವಂದಿಸಿದರು. ಕಾರ‍್ಯಕ್ರಮವು ಶಾಂತಿಮಂತ್ರದೊಂದಿಗೆ ಕೊನೆಗೊಂಡಿತು

By Suddi9

Leave a Reply

Your email address will not be published. Required fields are marked *