ಬಂಟ್ವಾಳ : ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ “ನಮ್ಮ ಶಾಲೆ ನನ್ನ ಕೊಡುಗೆ” ಕಾರ್ಯಕ್ರಮದಡಿ ಪೀಠೋಪಕರಣ ವ್ಯವಸ್ಥೆಗೆ ಶಾಲಾ ಹಳೆ ವಿದ್ಯಾರ್ಥಿ, ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ರಾಧಾಕೃಷ್ಣ ರಾವ್ ಅವರು ಶಾಲೆಗೆ ಭೇಟಿ ನೀಡಿ 2 ಲಕ್ಷ ರೂಪಾಯಿಗಳ ಸಹಾಯಧನ ಹಸ್ತಾಂತರಿಸಿದರು.
 

 ಈ ಸಂದರ್ಭ ಅವರ ಸಹೋದರ ಪುತ್ತೂರಿನ ಉದ್ಯಮಿ ರಘುನಾಥ್ ರಾವ್ ಜೊತೆಗಿದ್ದರು. ಇವರು ಇದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ್ದ ದಿವಂಗತ ಶಂಕರನಾರಾಯಣ ರಾವ್ ಅವರ ಪುತ್ರರಾಗಿದ್ದಾರೆ. 

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಧುಸೂಧನ್ ಐತಾಳ್, ಸದಸ್ಯರುಗಳಾದ ಸುರೇಶ್ ನಾಯ್ಕ್, ನಝೀರ್, ಶಾಲಾ ಮುಖ್ಯೋಪಾಧ್ಯಾಯ ಅಬೂಬಕ್ಕರ್ ಅಶ್ರಫ್, ಶಿಕ್ಷಕರಾದ ಸವಿತಾ ಭಟ್, ವೀಣಾ, ಮಲ್ಲಿಕಾ ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *