ಬಂಟ್ವಾಳ: ಭಾರತೀಯ ಜನತಾ ಪಾರ್ಟಿ  ಮಂಗಳೂರು ಮಂಡಲ ಓಬಿಸಿ ಮೋರ್ಚಾದ ಕಾರ್ಯಕಾರಿಣಿ ಸಭೆಯು  ತೊಕ್ಕೊಟ್ಟಿನ ಪಕ್ಷದ ಕಚೇರಿಯಲ್ಲಿ
ನಡೆಯಿತು.

ಮಂಗಳೂರು ಮಂಡಲದ ಓಬಿಸಿ ಮೋರ್ಚಾದ ಅಧ್ಯಕ್ಷರಾದ  ಗಣೇಶ್ ಸುವರ್ಣ ತುಂಬೆ ಅವರು ಅಧ್ಯಕ್ಷತೆ ವಹಿಸಿದ್ದರು, ಸಭೆಯಲ್ಲಿ ಜಿಲ್ಲಾ ಓಬಿಸಿ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ಅವರು ಮುಂದಿನ ದಿನಗಳಲ್ಲಿ ಓಬಿಸಿ ಮೋರ್ಚಾ ವತಿಯಿಂದ ನಡೆಸಯಬೇಕಾಸ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ಮಂಡಲ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ  ಶೇಖರ್ ಕಣಿರ್ ತೋಟ  ಸ್ವಾಗತಿಸಿದರು.  ಇನ್ನೊರ್ವ ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ್ ಕಾಪಿಕಾಡು ವಂದಿಸಿದರು. ಹಿಂದುಳಿದ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ  ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *