ಬಂಟ್ವಾಳ: ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ಇದರ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದ ಸಭಾಂಗಣದಲ್ಲಿ  ನಡೆಯಿತು.
 ಶಾಲಾ ಸಂಚಾಲಕರಾದ  ಬಿ.ಸುರೇಶ್ ವಿ.ಬಾಳಿಗಾ ಅವರು ಅಧ್ಯಕ್ಷತೆ ವಹಿಸಿದ್ದರು.
 
ಶಿಕ್ಷಕಿ  ತೀರ್ಥವತಿ ಮತ್ತು ಮುಖ್ಯೋಪಾಧ್ಯಾಯಿನಿಯಾದ   ರೋಶನಿ ತಾರಾ ಡಿ’ಸೋಜ ಅವರು
೨೦೨೫-೨೬ ನೇ ಸಾಲಿನ ಆಯ-ವ್ಯಯ ಮಂಡಿಸಿದರು. ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. 
 ದೈಹಿಕ ಶಿಕ್ಷಣ ಶಿಕ್ಷಕ  ಚಂದ್ರಹಾಸ್ ಎಂ ಸ್ವಾಗತಿಸಿದರು ಶಿಕ್ಷಕ  ಮುರಳೀಧರ ಪಿ. ಕಾರ್ಯಕ್ರಮ  ನಿರೂಪಿಸಿದರು.  ಶಿಕ್ಷಕಿ  ಅನುಪಮಾ ವಂದಿಸಿದರು.

By Suddi9

Leave a Reply

Your email address will not be published. Required fields are marked *